ಹುಬ್ಬಳ್ಳಿ ಸ್ಪೋರ್ಟ್ಸ್ ಮೈದಾನದಲ್ಲಿ ಧ್ವಜಾರೋಹಣ
1 min read
ಹುಬ್ಬಳ್ಳಿ: ದೇಶಪಾಂಡೆನಗರದಲ್ಲಿನ ಹುಬ್ಬಳ್ಳಿ ಸ್ಪೋರ್ಟ್ಸ್ ಮೈದಾನದಲ್ಲಿ 71ನೇ ಗಣರಾಜ್ಯೋತ್ಸವವನ್ನ ಸಡಗರದಿಂದ ಆಚರಣೆ ಮಾಡಲಾಯಿತು.
ನಮ್ಮ ಸಮಿತಿ ವತಿಯಿಂದ ಗಣರಾಜ್ಯೋತ್ಸವ ದಿನಾಚರಣೆಯನ್ನು ಹುಬ್ಬಳ್ಳಿ ಸ್ಪೋರ್ಟ್ಸ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುವ ಧುರೀಣ ರಜತ ಉಳ್ಳಾಗಡ್ಡಿಮಠ ಧ್ವಜಾರೋಹಣ ನೆರವೇರಿಸಿದರು.
ಮಾಜಿ ಸಂಸದ ಐ ಜಿ ಸನದಿ, ಹಿರಿಯ ನ್ಯಾಯವಾದಿ ಬಿ.ಡಿ.ಹೆಗಡೆ ವಿಶೇಷ ಆಮಂತ್ರಿತರಾಗಿ ಆಗಮಿಸಿದ್ದರು. ಸಿಬಿಎಲ್ ಹೆಗಡೆ ಅಧ್ಯಕ್ಷತೆಯಲ್ಲಿ ಮಾಜಿ ಶಾಸಕ ಗಡ್ಡದೇವಮಠ, ಹುಡಾ ಮಾಜಿ ಅಧ್ಯಕ್ಷ ಕಾಡಯ್ಯ ಹಿರೇಮಠ, ಪ್ರೀತಮ ಸವದತ್ತಿ, ಚೇತನ ಬಿಜವಾಡ, ಅಮೃತ ಇಜಾರಿ, ಸೋಮಲಿಂಗ ಎಲಿಗಾರ, ವಿ.ಎನ್. ಶಿರಾಳಕರ, ಅನಿತಾ ಗುಂಜಾಳ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಡಾ.ಪಾಟೀಲ ಪುಟ್ಟಪ್ಪನವರು ಹುಬ್ಬಳ್ಳಿ ಸ್ಪೋರ್ಟ್ಸ್ ಮೈದಾನದಲ್ಲಿ ನಿರಂತರವಾಗಿ ಧ್ವಜಾರೋಹಣ ಮಾಡುತ್ತಿದ್ದರು. ಅವರ ಅಗಲಿಕೆ ಈ ಸಮಯದಲ್ಲಿ ಎದ್ದು ಕಾಣುತ್ತಿತ್ತು.