ಹುಬ್ಬಳ್ಳಿಯಲ್ಲೇ “ಚಿನ್ನ” ದೋಚುಕೋರನ ಬಂಧನ
1 min read
ಹುಬ್ಬಳ್ಳಿ: ರೇಲ್ವೆ ಪ್ರಯಾಣಿಕರ 10ಲಕ್ಷ ಮೌಲ್ಯದ ಬಂಗಾರದ ಆಭರಣ ಕಳ್ಳತನ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನ ಬಂಧನ ಮಾಡುವಲ್ಲಿ ಹುಬ್ಬಳ್ಳಿ ರೇಲ್ವೆ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿ ಮಂಟೂರು ರಸ್ತೆಯ ನಿವಾಸಿ ಸನ್ನಿ ಸನ್ಮಾನ ಹವೀಜಾ ಎಂಬ 24 ವಯಸ್ಸಿನ ಯುವಕನೇ ಬಂಧಿತನಾಗಿದ್ದು, 10ಲಕ್ಷ ಮೌಲ್ಯದ ಚಿನ್ನಾಭರಣಗಳು ಹಾಗೂ ವಿವಿಧ ಕಂಪನಿಯ ಮೊಬೈಲಗಳನ್ನ ವಶಕ್ಕೆ ಪಡೆಯಲಾಗಿದೆ. 2019-20ರಲ್ಲಿ ನಡೆದ 7 ಏಳು ಪ್ರಕರಣಗಳು ಈ ಮೂಲಕ ಪತ್ತೆಯಾಗಿವೆ.
ರೈಲ್ವೆ ಎಸ್ಪಿ ಡಿ.ಆರ್.ಸಿರಿಗೌರಿ, ಡಿಎಸ್ಪಿ ಪುಷ್ಪಲತಾ ಮಾರ್ಗದರ್ಶನದಲ್ಲಿ ರೈಲ್ವೆ ವೃತ್ತ ನಿರೀಕ್ಷಕ ಜೆ.ಎಂ.ಕಾಲೆಮಿರ್ಚಿ, ಪಿಎಸ್ಐ ಸತ್ಯಪ್ಪ, ಸಿಬ್ಬಂದಿಗಳಾದ ನಿಂಗಪ್ಪ ಹಾವನ್ನಗೋಳ, ಬಸವರಾಜ ಯಕ್ಕಣ್ಣನವರ, ರಮೇಶ ಲಮಾಣಿ, ಸುಭಾಸ ದಳವಾಯಿ, ಯೂಸುಫ ನದಾಫ, ರವಿ ವಾಲ್ಮೀಕಿ, ಪ್ರವೀಣ ಪಾಟೀಲ ಆರೋಪಿಯನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣವೂ ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಆರೋಪಿಯನ್ನ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನದಲ್ಲಿಡಲಾಗಿದೆ.