ಹುಬ್ಬಳ್ಳಿಯಲ್ಲಿ ಐಪಿಎಸ್ ಸಂಧು: ಕಮೀಷನರ್ ಕಚೇರಿಯಲ್ಲಿ ನಡೆದದ್ದೇನು..!
1 min read
ಹುಬ್ಬಳ್ಳಿ: ಕರ್ನಾಟಕ ಸರಕಾರದ ಪೊಲೀಸ್ ಇಲಾಖೆಯ ಸಿಐಡಿ ಡಿಜಿಯವರಿಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ವಿಶೇಷ ಸಭೆಯನ್ನ ನಡೆಸಿ, ಎಲ್ಲ ಅಧಿಕಾರಿಗಳಿಗೆ ಹಲವು ಸೂಚನೆಗಳನ್ನ ನೀಡಿದರು.
ಸಿಐಡಿ ಡಿಜಿಯಾಗಿರುವ ಐಪಿಎಸ್ ಪಿ.ಎಸ್.ಸಂಧು ಅವರು ಎನ್.ಡಿ.ಪಿ.ಎಸ್ ಪ್ರಕರಣಗಳ ಪರಿಶೀಲನಾ ಸಭೆಯನ್ನು ಪೊಲೀಸ ಆಯುಕ್ತರ ಕಛೇರಿಯಲ್ಲಿ ನಡೆಸಿದರು. ಎನ್.ಡಿ.ಪಿ.ಎಸ್. ಪ್ರಕರಣಗಳ ಹೆಚ್ಚಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಪೊಲೀಸ ಆಯುಕ್ತ ಲಾಬುರಾಮ್ ಅವರು ಸ್ವಾಗತಿಸಿದರು. ಈ ಘಟಕದಲ್ಲಿ ದಾಖಲಾದ ಎನ್.ಡಿ.ಪಿ.ಎಸ್. ಪ್ರಕರಣಗಳ ತನಿಖೆ ಕೈಕೊಂಡ ಬಗ್ಗೆ ವಿವರಿಸಿದರು. ಸಭೆಯಲ್ಲಿ ಘಟಕದ ಎಲ್ಲ ಅಧಿಕಾರಿಗಳು ಭಾಗವಹಿಸಿದ್ದರು. ಐಪಿಎಸ್ ಸಂಧು ಅವರಿಗೆ ಪೊಲೀಸ್ ಕಮೀಷನರ್ ಕಚೇರಿ ಎದುರಿಗೆ ಗೌರವ ಸೂಚಿಸಿ, ಕಚೇರಿಯೊಳಗೆ ಬರಮಾಡಿಕೊಂಡರು.