ಹೆಂಡತಿ ಕೊಲೆ ಮಾಡಲು ಬಂದಿದ್ದು ಡಾಕ್ಟರ್: ದಾವಣಗೆರೆ ಮೂಲದಾತ ಜೈಲು ಪಾಲಾದ
ಹುಬ್ಬಳ್ಳಿ: ತನ್ನ ಪತ್ನಿಯ ಜೊತೆಗಿನ ಕೌಟುಂಬಿಕ ಜಗಳದಿಂದ ಪತ್ನಿಯ ಮನೆಯವರನ್ನೇ ಕೊಲೆ ಮಾಡಲು ಮುಂದಾಗಿ, ಮಾವನನ್ನ ಕೊಲೆ ಮಾಡಿ, ಅತ್ತೆಯನ್ನ ಗಂಭೀರವಾಗಿ ಗಾಯಗೊಳಿಸಿ, ಹೆಂಡತಿಗೂ ಚಾಕು ಹಾಕಲು ಹೋಗಿದ್ದು ಓರ್ವ ಡೆಂಟಿಸ್ಟ್.
ಇಂದು ಬೆಳಿಗ್ಗೆ ಲಿಂಗರಾಜನಗರದಲ್ಲಿ ನಡೆದ ಶಂಕ್ರಪ್ಪ ಮುಶಣ್ಣನವರ ಕೊಲೆ ಹಾಗೂ ಅತ್ತೆ ನಾಗರತ್ನಾ ಹಾಗೂ ಹೆಂಡತಿ ಲತಾರನ್ನ ಕೊಲೆ ಮಾಡಲು ಯತ್ನಿಸಿದ್ದು, ವಿದ್ಯಾವಂತ ಸಂತೋಷ ಶಿವಾನಂದಪ್ಪ ಎಸ್.ಜಿ ಎನ್ನುವುದು ಎಲ್ಲರಿಗೂ ಗೊತ್ತಾಗಿದೆ. ದಾವಣಗೆರೆ ವಿದ್ಯಾನಗರದ ನಿವಾಸಿಯಾಗಿರುವ ಸಂತೋಷ, ಡೆಂಟಿಸ್ಟ್ (ಎಂಡಿಎಸ್) ಆಗಿ ಕಾರ್ಯನಿರ್ವಹಣೆ ಮಾಡುತ್ತಿದ್ದರು.
ತೀವ್ರವಾಗಿ ಗಾಯಗೊಂಡಿರುವ ಸಂತೋಷರಿಗೆ ಮಗಳನ್ನ ಕೊಟ್ಟಿದ್ದ ನಾಗರತ್ನಾರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಕಿಮ್ಸನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪತ್ನಿ ಲತಾರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆದಿದ್ದಾರೆ.
ವಿದ್ಯಾವಂತ ಸಂತೋಷ, ಹಿರಿಯರ ಸಮ್ಮುಖದಲ್ಲಿ ಮುಗಿಯಬೇಕಾಗಿದ್ದ ಪ್ರಕರಣವನ್ನ ದೊಡ್ಡದೊಂದು ರಾದ್ಧಾಂತ ಮಾಡುವ ಮೂಲಕ, ಮಾವನನ್ನ ಕೊಲೆ ಮಾಡಿ, ತಾನೂ ಜೈಲು ಪಾಲಾಗುವಂತೆ ಮಾಡಿದೆ. ವಿದ್ಯಾವಂತರೆನಿಸಿಕೊಂಡ ಸಂತೋಷ, ಇಷ್ಟೊಂದು ಮಾನಸಿಕವಾಗಿ ಕುಗ್ಗಿ ಹೋಗಲು ಕಾರಣವಾಗಿದ್ದೇನೋ..