ಕರ್ನಾಟಕ ಬಂದ್: ಹುಬ್ಬಳ್ಳಿ-ಧಾರವಾಡ ಡಿಸಿಪಿ ಬಸರಗಿ ಎಚ್ಚರಿಕೆ
1 min read
ಹುಬ್ಬಳ್ಳಿ: ಇಂದಿನ ಕರ್ನಾಟಕ ಬಂದ್ ವೇಳೆಯಲ್ಲಿ ಯಾರಾದರೂ ಕಾನೂನನ್ನ ಕೈಗೆ ತೆಗೆದುಕೊಂಡರೇ ಸೂಕ್ತ ಕಾನೂನು ಕ್ರಮವನ್ನ ತಕ್ಷಣವೇ ತೆಗೆದುಕೊಳ್ಳಲಾಗುವುದು ಎಂದು ಹುಬ್ಬಳ್ಳಿ-ಧಾರವಾಡ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಬಸರಗಿ ಎಚ್ಚರಿಕೆ ನೀಡಿದರು.
ಅವಳಿನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ 4 ಎಸಿಪಿ, 27 ಇನ್ಸಪೆಕ್ಟರ್, 24 ಸಬ್ ಇನ್ಸಪೆಕ್ಟರ್, 139 ಎಎಸ್ಐಗಳು ಹಾಗೂ 835 ಸಿಬ್ಬಂದಿಗಳನ್ನ ಬಂದೋಬಸ್ತಗೆ ನಿಯೋಜನೆ ಮಾಡಲಾಗಿದೆ ಎಂದು ಡಿಸಿಪಿ ಹೇಳಿದರು.
ಒತ್ತಾಯಪೂರ್ವಕವಾಗಿ ಬಂದ್ ಮಾಡಲು ಪ್ರಯತ್ನ ಪಟ್ಟರೇ, ಜನರಲ್ಲಿ ಗೊಂದಲ ಸೃಷ್ಟಿ ಮಾಡಲು ಮುಂದಾದರೇ ಕಾನೂನು ಕ್ರಮವನ್ನ ಜರುಗಿಸಲಾಗುವುದೆಂದು ಹೇಳಿದ ಅವರು, ಸಾರ್ವಜನಿಕರ ನೆಮ್ಮದಿಯನ್ನ ಭಂಗ ಮಾಡುವುದನ್ನ ಸಹಿಸುವುದಿಲ್ಲವೆಂದರು.
ಇಂದಿನ ಬಂದ್ ಕಾಲಕ್ಕೆ ಪ್ರತಿಯೊಂದು ಪ್ರಮುಖ ಸ್ಥಳಗಳಲ್ಲಿ ಬಿಗಿ ಪೊಲೀಸ್ ಕಾವಲು ಹಾಕಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ ಎಂದು ಡಿಸಿಪಿ ಬಸರಗಿ ಹೇಳಿದರು.