ನಿದ್ದೆಯಿಂದೆದ್ದ ಮಹಾನಗರ ಪಾಲಿಕೆ: ಹುಬ್ಬಳ್ಳಿಯಲ್ಲೂ ನಡೆಯುತ್ತಿದೆ ತೆರವು ಕಾರ್ಯಾಚರಣೆ
1 min read
ಹುಬ್ಬಳ್ಳಿ: ನಗರದ ಬಹುತೇಕ ರಸ್ತೆಗಳ ಪುಟ್ ಪಾತ್ ಗಳನ್ನ ಕಬಳಿಕೆ ಮಾಡಿಕೊಂಡಿದ್ದರೂ, ತನಗೇನು ಸಂಬಂಧವೇ ಇಲ್ಲವೆಂದುಕೊಂಡು ಸುಮ್ಮನಿದ್ದ ಮಹಾನಗರ ಪಾಲಿಕೆ ಕೊನೆಗೂ ಎಚ್ಚೆತ್ತು ಕಾರ್ಯಾಚರಣೆಗೆ ಮುಂದಾಗಿದೆ.
ಸಾರ್ವಜನಿಕರು ಹೆಚ್ಚು ಸಂಚರಿಸುವ ರಸ್ತೆಗಳಲ್ಲಿ ಪುಟ್ ಪಾತ್ ಮಾಯವಾಗಿ ಹಲವು ವರ್ಷಗಳೇ ಕಳೆದಿದ್ದವು. ಇದರಿಂದ ಸಾರ್ವಜನಿಕರು ರಸ್ತೆಯಲ್ಲಿ ಸಂಚರಿಸುವ ಸ್ಥಿತಿ ನಿರ್ಮಾಣವಾಗಿತ್ತು. ಅದೇ ಕಾರಣಕ್ಕೆ ಜನರಿಂದ ಹಲವು ಬಾರಿ ಮಹಾನಗರ ಪಾಲಿಕೆ ಅಸಹ್ಯಕ್ಕೂ ಒಳಗಾಗಿತ್ತು.
ಆದರಿಂದು ಎಚ್ಚರಗೊಂಡು ಕಾರ್ಯಾಚರಣೆ ಆರಂಭಿಸಿದೆ. ವಾಣಿಜ್ಯನಗರಿಯ ಪ್ರಮುಖ ಬೀದಿಗಳಲ್ಲಿ ನಾಯಿ ಕೊಡೆಗಳಂತೆ ಹಬ್ಬಿದ್ದ ಪುಟ್ ಪಾತ್ ಗೂಡಂಗಡಿಗಳನ್ನ ತೆರವು ಮಾಡಲಾಗುತ್ತಿದೆ. ತಮ್ಮ ಅಂಗಡಿ ಮುಂದೆ ಹೆಚ್ಚುವರಿ ಜಾಗವನ್ನ ಕಬಳಿಸಿದ್ದನ್ನೂ ತೆರವು ಮಾಡಲಾಗುತ್ತಿದೆ.
ಪೊಲೀಸರ ಸಹಕಾರದಿಂದ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಯಾವುದೇ ಅಡಚಣೆ ಉಂಟಾಗಿಲ್ಲ. ಕಾರ್ಮಿಕರು ಹಾರೆ, ಗುದ್ದಲಿ ಸಮೇತ ಕಾರ್ಯಾಚರಣೆಗೆ ಇಳಿದಿದ್ದು, ಸಣ್ಣಪುಟ್ಟ ರಸ್ತೆಗಳೆಲ್ಲವೂ ಇದೀಗ ದೊಡ್ಡದಾಗಿ ಕಾಣತೊಡಗಿವೆ.