Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲಿಂದು ನಡೆಯಿತು ‘ಬೆಟ್ಟದ ಹೂ’ ಸಿನೇಮಾ ಕಥೆ- ಪೊಲೀಸ್ ಪೇದೆ ‘ಶಂಭು ರೆಡ್ಡಿ’ ಮಾಡಿದ್ದೇನು..?

1 min read
Spread the love

ಹುಬ್ಬಳ್ಳಿ: ಇದು ವಿಜಯದಶಮಿ. ಎಲ್ಲರೂ ಮನೆಯಲ್ಲಿ ಪೂಜೆ ಮಾಡುವ ಅವಸರವಿದ್ದರೇ ಇಲ್ಲೋಬ್ಬ ಬಾಲಕನಿಗೆ ತನ್ನ ಮಾವಿನ ತಳಿರು ಮಾರುವ ಉಮೇದಿ. ಗ್ರಾಹಕರು ಹೆಚ್ಚಿಗೆ ಬಂದು ಖರೀದಿ ಮಾಡಿದ್ರೇ, ಮನೆಗೆ ಹೋಗುವಾಗ ತಾನು ಬಯಸಿದ್ದನ್ನ ತೆಗೆದುಕೊಂಡು ಹೋಗಬೇಕೆಂದುಕೊಂಡವ. ಆದರೆ, ನಡೆದದ್ದೇ ಬೇರೆ..

ನಿಮಗೆ ಬೆಟ್ಟದ ಹೂವು ಸಿನೇಮಾ ನೋಡಿದ್ದರೇ ಪುನೀತರಾಜಕುಮಾರ ಅಭಿನಯವನ್ನ ನೀವೂ ನೋಡಿರುತ್ತೀರಿ. ಅದರಲ್ಲಿ ಬಡ ಹುಡುಗ ದಿನವೂ ಪೈಸೆ ಪೈಸೆ ಕೂಡಿಸಿ, ರಾಮಾಯಣದ ಬುಕ್ ನ್ನ ಖರೀದಿ ಮಾಡಲು ಪ್ರಯತ್ನ ಮಾಡುತ್ತಿರುತ್ತಾನೆ. ಅಂತಹದೇ ಸ್ಥಿತಿಯಲ್ಲಿದ್ದ ಬಾಲಕ ಕಂಡು ಬಂದಿದ್ದು, ವಾಣಿಜ್ಯನಗರಿಯಲ್ಲಿ.

ಕುಮಾರ ಎಂಬ ಹುಡುಗ ವಿಜಯದಶಮಿಯ ದಿನದಂದು ಮಾವಿನ ತಳಿರು ಮಾರಾಟ ಮಾಡಿ, ಪುಸ್ತಕವನ್ನ ಖರೀದಿ ಮಾಡಲು ಮುಂದಾಗಿದ್ದ. ಈ ವಿಷಯವನ್ನ ಅರಿತುಕೊಂಡ ಪೂರ್ವ ಸಂಚಾರಿ ಠಾಣೆಯ ಪೊಲೀಸ ಶಂಭು ರೆಡ್ಡಿ, ಬಾಲಕನಿಗೆ ತಾವೇ ಮುಂದಾಗಿ ಆತನಿಗೆ ಬೇಕಾದ ಎಲ್ಲ ಪುಸ್ತಕಗಳನ್ನ ಕೊಡಿಸಿದ್ದಾರೆ.

ಕುಮಾರ ಪುಸ್ತಕ ಪಡೆದು ಹಸನ್ಮುಖಿಯಾಗಿ ಪೊಲೀಸ್ ಶಂಭು ರೆಡ್ಡಿ ಅವರಿಗೆ ಧನ್ಯವಾದ ತಿಳಿಸಿ ಮುನ್ನಡೆದ. ವಿಜಯದಶಮಿಯ ದಿನದಂದು ಮಾಡಿದ ಸಹಾಯವನ್ನ ಸ್ಮರಿಸಿಕೊಳ್ಳುತ್ತಲೇ ಶಂಭು ರೆಡ್ಡಿ ಮತ್ತೆ ಕರ್ತವ್ಯಕ್ಕೆ ಹಾಜರಾದರು.

ಇಂತಹ ಪೊಲೀಸರು ಯಾವುದೇ ಫಲಾಪೇಕ್ಷೆಯಿಲ್ಲದೇ ಯಾರಿಗೂ ಗೊತ್ತಾಗದ ಹಾಗೇ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಪೊಲೀಸರಿಂದಲೇ ಇಲಾಖೆಯ ಗೌರವ ದುಪ್ಪಟ್ಟಾಗುತ್ತದೆ.


Spread the love

Leave a Reply

Your email address will not be published. Required fields are marked *