ಹುಬ್ಬಳ್ಳಿಯಲ್ಲಿ ಬಸ್ ಬಂದ್: ಊರು ಬಿಡೋರು ಸ್ವಲ್ಪ ಹುಷಾರು
1 min read
ಹುಬ್ಬಳ್ಳಿ: ತಮ್ಮ ಬೇಡಿಕೆ ಈಡೇರಿಸುವಂತೆ ಕೆಎಸ್ಸಾರ್ಟಿಸಿ ನೌಕರರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ ಸರಕಾರ ಯಾವುದೇ ರೀತಿಯ ಸ್ಪಂದನೆ ನೀಡದೇ ಇರುವುದರಿಂದ ಇಂದು ಬೆಳಗಿನಿಂದ ಚಾಲಕ, ನಿರ್ವಾಹಕರು ಬಸ್ ಬಂದ್ ಮಾಡಿ ಪ್ರತಿಭಟನೆ ಮಾಡುತ್ತಿದ್ದಾರೆ.
ಹಳೇ ಬಸ್ ನಿಲ್ದಾಣದ ಹೊರಗಡೆಯಿಂದ ಪ್ರತಿಭಟನೆ ಮಾಡುತ್ತಿರುವ ನೌಕರರು, ಸಂಚಾರವನ್ನ ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದಾರೆ. ಹೊರಗಡೆಯಿದ್ದ ಬಸ್ಸಗಳನ್ನೂ ನಿಲ್ದಾಣದಲ್ಲಿ ನಿಲ್ಲಿಸುತ್ತಿದ್ದು, ಪ್ರಯಾಣೀಕರು ಪರದಾಡುವಂತಾಗಿದೆ.
ಹೊಸೂರು ಸರ್ಕಲ್, ಐಟಿ ಪಾರ್ಕ ಬಳಿಯೂ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಎಲ್ಲ ಬಸ್ ಗಳು ಬಂದಾಗಿವೆ. ಸಾರಿಗೆ ನೌಕರರನ್ನ ಸರಕಾರಿ ನೌಕರರು ಎಂದು ಪರಿಗಣಿಸಬೇಕು. ಅವರನ್ನೂ ಕೊರೋನಾ ವಾರಿಯರ್ಸ್ ಎಂದು ಪರಿಗಣಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನಿಟ್ಟುಕೊಂಡು ಬೆಂಗಳೂರಿನಲ್ಲಿ ಹೋರಾಟ ನಡೆಯುತ್ತಿದೆ.
ರಾಜ್ಯ ಸರಕಾರ ಕಳೆದ ಎರಡು ದಿನಗಳಿಂದಲೂ ಯಾವುದೇ ರೀತಿಯ ಪ್ರತಿಕ್ರಿಯೆ ಕೊಡದ ಹಿನ್ನೆಲೆಯಲ್ಲಿ ಅವಳಿನಗರದಲ್ಲಿಯೂ ಬಸ್ ಸಂಚಾರ ಮಾಡಿದ್ದು, ಸರಕಾರಕ್ಕೆ ನುಂಗಲಾರದ ತುತ್ತಾಗಲಿದೆ. ನೌಕರರ ಸಡನ್ನ ಹೋರಾಟದಿಂದ ದೂರದೂರಿಂದ ಬಂದವರು ಸಂಕಟಪಡುವಂತಾಗಿದೆ.