ತಲ್ವಾರೇಟು ತಿಂದ ಪ್ರೇಮಿ ಜನರಲ್ ವಾರ್ಡಗೆ ಶಿಫ್ಟ್: ಆತ ಜೈಲುಪಾಲು
1 min read
ಹುಬ್ಬಳ್ಳಿ: ದೇಶಪಾಂಡೆನಗರಲ್ಲಿ ಹಾಡುಹಗಲೇ ತನ್ನ ಪ್ರೇಮಿಯನ್ನ ಮನಸೋ ಇಚ್ಚೆ ತಲ್ವಾರನಿಂದ ಹೊಡೆದು ಪ್ರಿಯಕರ ಜೈಲುಪಾಲಾಗಿದ್ದರೇ, ಆತನಿಂದ ಹಲ್ಲೆಗೊಳಗಾದ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಗೋಲ್ಡ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯುವತಿಯನ್ನ ಪ್ರೇಮಿಸುತ್ತಿದ್ದ ಇಸ್ಮಾಯಿಲ್, ತನ್ನ ಬಿಡಬೇಡ ಎನ್ನುತ್ತಲೇ ಆಕೆಯನ್ನ ಮೂರು ಬಾರಿ ತಲ್ವಾರನಿಂದ ಹೊಡೆಯುತ್ತಿದ್ದ ದೃಶ್ಯ ರಾಜ್ಯಾಧ್ಯಂತ ಚರ್ಚೆಯನ್ನ ಹುಟ್ಟು ಹಾಕುವಂತೆ ಮಾಡಿತ್ತು. ಇಂತಹ ಮನಸ್ಥಿತಿ ಬಂದಿರೋದು ಯಾಕೆ ಎನ್ನುವಂತಾಗಿತ್ತು.
ಇದೀಗ ಈ ಘಟನೆಯಲ್ಲಿ ಗಾಯಗೊಂಡಿದ್ದ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ತುರ್ತು ಚಿಕಿತ್ಸಾ ಘಟಕದಲ್ಲಿದ್ದ ಆಕೆಯನ್ನಿಂದು ಜನರಲ್ ವಾರ್ಡಿಗೆ ಶಿಪ್ಟ್ ಮಾಡಲಾಗಿದೆ. ಹಾಗೇಯೇ ಯುವತಿಯ ಆರೋಗ್ಯದಲ್ಲಿ ಸಾಕಷ್ಟು ಚೇತರಿಕೆ ಕಂಡು ಬಂದಿದೆ.
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿಯ ಜೊತೆ ಆಕೆಯ ತಾಯಿಯಿದ್ದು, ಇನ್ನುಳಿದಂತೆ ಕಾನೂನು ಕ್ರಮಗಳನ್ನ ಉಪನಗರ ಠಾಣೆ ಪೊಲೀಸರು ತೆಗೆದುಕೊಳ್ಳುತ್ತಿದ್ದಾರೆ.