ಹೆಲ್ತ್ ಪ್ರಾಬ್ಲಂನಲ್ಲಿ ಪೊಲೀಸ್ ಕಮೀಷನರ್ ಲಾಬುರಾಮ್- ಎಸ್ ಡಿಎಂ ನಿಂದ ಮಣಿಪಾಲಗೆ ಶಿಫ್ಟ್
1 min read
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡದ ನೂತನ ಪೊಲೀಸ್ ಕಮೀಷನರ್ ಲಾಬುರಾಮ್ ಅವರನ್ನ ಧಾರವಾಡದ ಎಸ್ ಡಿಎಂ ಆಸ್ಪತ್ರೆಯಿಂದ ಮಣಿಪಾಲ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ಆರೋಗ್ಯದಲ್ಲಿ ಸ್ಥಿರತೆಯಿದೆ ಎಂದು ಗೊತ್ತಾಗಿದೆ.
ಕಳೆದ ಎರಡು ದಿನದ ಹಿಂದಿನಿಂದಲೂ ಎಸ್ ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆರೋಗ್ಯದಲ್ಲಿ ತೀವ್ರ ಏರುಪೇರಾಗಿದ್ದರಿಂದ ಕುಟುಂಬದ ಸದಸ್ಯರು ರಾತ್ರಿಯೇ ಬೇರೆ ಆಸ್ಪತ್ರೆಗೆ ರವಾನೆ ಮಾಡಿರುವುದು ಗೊತ್ತಾಗಿದೆ.
ಅವಳಿನಗರದ ಪೊಲೀಸ್ ಆಯುಕ್ತರಾಗಿ ಇತ್ತೀಚೆಗೆ ಅಧಿಕಾರ ವಹಿಸಿಕೊಂಡು ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದ ಲಾಬುರಾಮ್ ಖಡಕ್ ಅಧಿಕಾರಿಯಂದೇ ಹೆಸರು ಗಳಿಸಿದ್ದಾರೆ. ಅವರು ಬಂದ ನಂತರ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಲ್ಲಿ ಸಮನ್ವಯತೆ ಕಂಡು ಬಂದಿದ್ದು, ಕ್ರೈಂ ಪ್ರಕರಣಗಳು ಕೂಡಾ ಕಡಿಮೆಯಾಗಿದ್ದವು.
ಕೆಲವರು ಅವರಿಗೆ ಬಿಳಿ ರಕ್ತದ ಕಣಗಳು ಕಡಿಮೆಯಾಗಿದ್ದವು ಎಂದೂ ಇನ್ನೂ ಕೆಲವರು ಗಂಟಲು ನೋವು ಹೆಚ್ಚಾಗಿತ್ತು ಎಂದು ಹೇಳುತ್ತರಾದರೂ, ನಿಖರವಾಗಿ ಯಾವ ಸಮಸ್ಯೆಯಿಂದ ಬಳಲುತ್ತಿದ್ದರೆಂದು ಗೊತ್ತಾಗಿಲ್ಲ.