Posts Slider

Karnataka Voice

Latest Kannada News

ಕ್ಯಾಸೆಟ್ ಮಾರುತ್ತಿದ್ದವನನ್ನ ಮಾಧ್ಯಮಲೋಕಕ್ಕೆ ಕರೆತಂದಿದ್ದು ಆಪ್ತಮಿತ್ರ- ಪ್ರಶಸ್ತಿಗೆ ಆಯ್ಕೆಯಾದ ಗುರು ಭಾಂಡಗೆ ಯಾರೂ ಗೊತ್ತಾ..?

1 min read
Spread the love

ಹುಬ್ಬಳ್ಳಿ: ಅವತ್ತು ಆಗಷ್ಟ 15. ಲೋಕಲ್ ಕೇಬಲ್ ನಡೆಸುವವರಿಗೆ ಹೆಚ್ಚು ಕ್ಯಾಮರಾಮಗಳು ಬೇಕಾಗಿದ್ದವು. ಹಾಗಾಗಿಯೇ ನನ್ನ ಕರೆದುಕೊಂಡು ಬಂದು ಕೆಲಸಕ್ಕೆ ಹಚ್ಚಿದ್ದು ನನ್ನ ಕ್ಲಾಸ್ ಮೆಂಟ್ ವಾಮನ ಭಾಂಡಗೆ. ಆತನೇ ನನ್ನ ಈ ಫೀಲ್ಡಿಗೆ ತಂದಿದ್ದು. ಇಲ್ಲದಿದ್ದರೇ ಕ್ಯಾಸೆಟ್ ಮಾರುತ್ತ, ಮದುವೆಗಳನ್ನ ಶೂಟ್ ಮಾಡುತ್ತ ಇರುತ್ತಿದ್ದೆನೇನೋ ಎನ್ನುತ ಭಾವುಕರಾಗಿದ್ದು ಗುರು ಭಾಂಡಗೆ. ಇವರಿಗೀಗ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಕೊಡ ಮಾಡುವ ಎಂ.ಡಿ.ಗೋಗೇರಿ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ ಲಭಿಸಿದೆ.

ವಿಜಯವಾಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುರು ಭಾಂಡಗೆ ಅವರ ಕೂಲಿಕಾರನ ಬವಣೆ ಸೂಚಿಸುವ ಚಿತ್ರವಾದ ಮಣ ಭಾರಕ್ಕೆ ಈ ಪ್ರಶಸ್ತಿ ಲಭಿಸಿದ್ದು, ಗುರು ಭಾಂಡಗೆ ಬದುಕು ಕೂಡಾ ಮಣ ಭಾರ ಹೊರುತ್ತಲೇ ಸಾಗಿದೆ.

ತಂದೆ ದೋಂಡುಸಾ ಮತ್ತು ತಾಯಿ ಯಲ್ಲಮ್ಮನ ಮುದ್ದಿನ ಮಗನಾದ ಗುರು ಅವರು, ಮೊದಲು ಕ್ಯಾಸೆಟ್ ಮಾರಾಟ ಮಾಡುತ್ತ ವೀಡಿಯೋ ಶೂಟ್ ಮಾಡಿಕೊಂಡಿರುತ್ತಿದ್ದರು. 2007ಕ್ಕೆ ಸಂಯುಕ್ತ ಕರ್ನಾಟಕಕ್ಕೆ ಸೇರುವ ಮುನ್ನ ಲೋಕಲ್ ಕೇಬಲ್ ನಲ್ಲಿ ಕಾರ್ಯನಿರ್ವಹಿಸುವ ಹಾಗೇ ಮಾಡಿದ್ದು, ಒನ್ಸ್ ಅಗೇನ್ ವಾಮನ ಭಾಂಡಗೆ ಎಂಬ ಆಪ್ತಮಿತ್ರ.  ಲೋಕಲ್ ಕೇಬಲ್ ನಲ್ಲಿ ತೊಂದರೆಯಾದಾಗ ಸಧ್ಯ ಎಎನ್ಐದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹೇಂದ್ರ ಚವ್ಹಾಣರ ಬಳಿ ಕೆಲಸ ಮಾಡಿದ್ದರು.

ಸಂಯುಕ್ತ ಕರ್ನಾಟಕಕ್ಕೆ ಸೇರಿದ ಬಳಿಕ ಬದುಕಿನ ಮಜಲು ಬದಲಾಯಿತು. ಅದಾದ ನಂತರ 2012ರಿಂದ ವಿಜಯವಾಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುರು ಭಾಂಡಗೆ ಅವರಿಗೆ ನಾಲ್ಕು ಹೆಣ್ಣು ಮಕ್ಕಳಿದ್ದಾರೆ. ಪತ್ನಿ ಕವಿತಾ, ಮಕ್ಕಳಾದ ನೇಹಾ, ನಯನ, ಮೇಘಾ ಮತ್ತು ಸ್ಮೀತಾ ಜೊತೆಗೂಡಿ ಚೆಂದನೆಯ ಜೀವನ ನಡೆಸುತ್ತಿದ್ದಾರೆ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಲು ಸದಾಕಾಲ ಹಪಹಪಿಸುವ ಗುರು ಭಾಂಡಗೆ ಅವರಿಗೆ ಜಿಲ್ಲಾ ಪ್ರಶಸ್ತಿ ಬಂದಿರುವುದು ಸಂತಸ ಮೂಡಿಸಿದೆ.

ಆಗಸ್ಟ್ 15 ರ ಆ ಎಕ್ಸಟ್ರಾ ಕ್ಯಾಮರಾಮನ್ ಆಗಿ ವಾಮನ ಭಾಂಡಗೆ, ಈ ಗುರು ಭಾಂಡಗೆಯವರನ್ನ ಕರೆಯದೇ ಇದ್ದರೇ ಪತ್ರಿಕಾ ಲೋಕದಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸುತ್ತಿರುವ ಗುರು ಭಾಂಡಗೆ ಎಲ್ಲಿರುತ್ತಿದ್ದರೋ ಏನೋ. ಅದಕ್ಕೆ ಹೇಳುವುದು ಗೆಳೆತನ ಯಾವತ್ತೂ ಒಳ್ಳೆಯದನ್ನೇ ಮಾಡತ್ತೆ ಅನ್ನುವುದು..


Spread the love

Leave a Reply

Your email address will not be published. Required fields are marked *