ಗ್ರಾಮೀಣ ಶಿಕ್ಷಕರಿಗೆ 5 ಸಾವಿರ ಭತ್ಯೆ ನೀಡಿ: ಗ್ರಾಮೀಣ ಸಂಘದ ನೂತನ ಕೋಶಾಧ್ಯಕ್ಷ ಕೆ.ಎಂ.ಮುನವಳ್ಳಿ
1 min read
ಧಾರವಾಡ: ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಧಾರವಾಡ ಜಿಲ್ಲಾ ಕೋಶಾಧ್ಯಕ್ಷರಾಗಿ ಗರಗದ ಕೆ.ಎಂ. ಮುನವಳ್ಳಿ ಅವರನ್ನುಆಯ್ಕೆ ಮಾಡಲಾಗಿದೆ.
ರಾಜ್ಯಾಧ್ಯಕ್ಷ ಅಶೋಕ ಸಜ್ಜನ, ರಾಜ್ಯಪ್ರದಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ, ರಾಜ್ಯ ಗೌರವಾಧ್ಯಕ್ಷ ಎಲ್.ಐ. ಲಕ್ಕಮ್ಮನವರ, ಧಾರವಾಡ ತಾಲೂಕಿನ ಗೌರವಧ್ಯಕ್ಷ ಜಿ.ಬಿ. ಶೆಟ್ಟರ್, ಧಾರವಾಡ ಜಿಲ್ಲಾಧ್ಯಕ್ಷ ಅಕ್ಬರಲಿ ಸೋಲಾಪೂರ ಇವರ ಸಮ್ಮುಖದಲ್ಲಿ ಸತ್ಕರಿಸಿ ಅಭಿನಂದಿಸಲಾಯಿತು.
ಹುದ್ದೆ ಸ್ವೀಕರಿಸಿ ಮಾತನಾಡಿದ ಕೆ.ಎಂ. ಮುನವಳ್ಳಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಗಳಿ ಬಿಡುವಿನ ವೇಳೆಯಲ್ಲಿ ಗ್ರಾಮೀಣ ಶಿಕ್ಷಕರ ಸೇವೆಗೆ ನಾನು ಸದಾ ಸಿದ್ದ. ನಾವು ಹಳ್ಳಿಗಾಡಿನಲ್ಲಿ ಹುಟ್ಟಿ ಬೆಳೆದು ೨೫ ವರ್ಷಗಳಿಂದ ಹಳ್ಳಿಯಲ್ಲಿ ಸೇವೆ ಮಾಡುತ್ತಿದ್ದೇವೆ ನಮಗೆ ನಗರದಲ್ಲಿ ಸೇವೆ ಮಾಡುವ ಅವಕಾಶ ಕಲ್ಪಿಸಬೇಕಾಗಿದೆ, ಇಲ್ಲದಿದ್ದರೆ ಗ್ರಾಮೀಣ ಭತ್ಯೆ 5ಸಾವಿರ ರೂಪಾಯಿ ನೀಡಬೇಕು ಎಂದರು..
ಜಿ.ಬಿ. ಶೆಟ್ಟರ ಮಾತನಾಡಿ, ಗ್ರಾಮೀಣ ಶಿಕ್ಷಕರ ಸಂಘ ವರ್ಗಾವಣೆ ಸಮಸ್ಯೆ ಸೇರಿದಂತೆ ಗ್ರಾಮೀಣ ಶಿಕ್ಷಕರ ಹಲವಾರು ಸಮಸ್ಯೆಗಳಿಗೆ ಸ್ಪಂದಿಸುವುದರ ಜೊತೆಗೆ, ಮುಖ್ಯೋಪಾಧ್ಯಾಯರ ಸಮಸ್ಯೆ ಬಡ್ತಿ ವಿಚಾರ, ಹಿಂದಿ ಶಿಕ್ಷಕರ ಸಮಸ್ಯೆ, ಜಿ ಪಿ ಟಿ ಶಿಕ್ಷಕರ ಸಮಸ್ಯೆ ಸೇರಿದಂತೆ ಹಳ್ಳಿಯ ಶಿಕ್ಷಕರಿಗೆ ಐದು ಸಾವಿರ ಗ್ರಾಮೀಣ ಭತ್ಯೆ ಸೇರಿದಂತೆ ಅನೇಕ ಕೆಲಸಗಳನ್ನು ಸಂಘ ಮಾಡಿದೆ. ಮಾಡುತ್ತಿದೆ ಎಂದರು.