ಗ್ರಾಪಂ ಕಲಹ: ಮಗು ಬಲಿ ಪ್ರಕರಣ-ಪಿಎಸ್ಐ ಅಮಾನತ್ತು
1 min read
ಕಲಬುರಗಿ: ಗ್ರಾಮ ಪಂಚಾಯ್ತಿ ಕಲಹಕ್ಕೆ ನಾಲ್ಕು ವರ್ಷದ ಮಗು ಬಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜೇವರ್ಗಿ PSI ಮಂಜುನಾಥ್ ಹೂಗಾರ ಅಮಾನತ್ತು ಮಾಡಿ ಕಲಬುರಗಿ ಎಸ್ ಪಿ ಸಿಮಿ ಮರಿಯಮ್ ಜಾರ್ಜ್ ಆದೇಶ ಮಾಡಿದ್ದಾರೆ.
ಜೇವರ್ಗಿ ತಾಲೂಕಿನ ಜೈನಾಪುರ ಗ್ರಾಮದ ಗುಡೂರು ಗ್ರಾಮ ಗ್ರಾಮ ಪಂಚಾಯತ ಚುನಾವಣಾ ರಾಜಕೀಯದಲ್ಲಿ ನಾಲ್ಕು ವರ್ಷದ ಹೆಣ್ಣು ಮಗು ಬಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ಶವದೊಂದಿಗೆ ಎಸ್ಪಿ ಕಛೇರಿ ಮುಂದೆ ಪ್ರತಿಭಟನೆಗೆ ನಡೆಸಲಾಗಿತ್ತು.
ಡಾ. ಅಜಯ್ ಸಿಂಗ್ ಪ್ರತಿಭಟನೆಯ ವೇಳೆಯಲ್ಲಿ ಮಾತನಾಡಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಚುನಾವಣೆ ಆಯೋಗಕ್ಕೆ ಆಗ್ರಹಿಸಿದ್ದರು.
ರಾಜಕೀಯ ವೈಷಮ್ಯದಿಂದ ನಾಲ್ಕು ವರ್ಷದ ಮಗುವಿನ ಪ್ರಾಣ ಹೋಯಿತಲ್ಲ. ಈಗ ರಾಜಕೀಯದಲ್ಲಿ ಮಗುವಿನ ಜೀವನ ಕಳೆದುಕೊಂಡ ತಾಯಿಯ ಗತಿಯೇನು ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಈ ಕುರಿತು ಇಂತಹ ಹೀನ ಕೃತ್ಯ ಎಸಗಿದ ಪೊಲಿಸ್ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿಧಾನಸಭೆ ಪ್ರತಿಪಕ್ಷದ ಮುಖ್ಯಸಚೇತಕ ಡಾ. ಅಜಯ್ ಸಿಂಗ್ ಅವರು ಆಗ್ರಹಿಸಿದ್ದರು.
ಈ ಹಿನ್ನೆಲೆಯಲ್ಲಿ ಜೇವರ್ಗಿ ಪಿಎಸ್ಐ ಅವರನ್ನ ಅಮಾನತ್ತು ಮಾಡಲಾಗಿದೆ.