ಸರಕಾರಿ ಶಾಲೆ ಶಿಕ್ಷಕರ ಪತ್ನಿಯರು ಚುನಾವಣಾ ಕಣದಲ್ಲಿ: ರಂಗೇರಿದ ಗ್ರಾಪಂ ಅಖಾಡಾ
1 min read
ಧಾರವಾಡ: ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಇಬ್ಬರು ಸರಕಾರಿ ಶಾಲೆಯ ಶಿಕ್ಷಕರ ಪತ್ನಿಯರು ಚುನಾವಣೆ ಕಣದಲ್ಲಿ ಎದುರಾಳಿಗಳಾಗಿದ್ದಾರೆ. ಅಷ್ಟೇ ಅಲ್ಲ, ಶಿಕ್ಷಕರಿಬ್ಬರು ಅಣ್ಣ-ತಮ್ಮಂದಿರುವುದು ಕೂಡಾ ವಿಶೇಷವಾಗಿದೆ. ಇಂತಹ ಅಪರೂಪಕ್ಕೆ ಕಾರಣವಾಗಿದ್ದು, ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮ ಪಂಚಾಯತಿ ಚುನಾವಣೆ.
ಹೌದು.. ಇಲ್ಲಿ ಸಹೋದರರ ಪತ್ನಿಯರು ಅಖಾಡಾದಲ್ಲಿ ಇಳಿಯುವ ಮೂಲಕ ತಮ್ಮ ನಸೀಬನ್ನ ಪರೀಕ್ಷೆಗೆವೊಡ್ಡಿಕೊಂಡಿದ್ದಾರೆ. ಅಮ್ಮಿನಬಾವಿ ಗ್ರಾಮದ 6ನೇ ವಾರ್ಡಿನಲ್ಲಿ ಇಬ್ಬರು ಗೆಲುವಿಗಾಗಿ ಸ್ಪರ್ಧೆಯಲ್ಲಿದ್ದಾರೆ.
ಪ್ರವರ್ಗ ‘ಅ’ ಗುಂಪಿನ ಮಹಿಳಾ ಮೀಸಲು ಕ್ಷೇತ್ರಕ್ಕೆ ವೀಣಾ ಅಜಿತಕುಮಾರ ದೇಸಾಯಿ ಹಾಗೂ ಪದ್ಮಾವತಿ ತವನರಾಜ ದೇಸಾಯಿ ಕಣದಲ್ಲಿದ್ದಾರೆ. ಅಜಿತಕುಮಾರ ದೇಸಾಯಿ ಧಾರವಾಡ ತಾಲೂಕಿನ ಮಾರಡಗಿ ಉರ್ದು ಶಾಲೆಯಲ್ಲಿ ಶಿಕ್ಷಕರಾಗಿದ್ದು, ತವನರಾಜ ಕೂಡಾ ಶಿಕ್ಷಕ ವೃತ್ತಿಯಲ್ಲಿದ್ದಾರೆ.
ವೀಣಾ ದೇಸಾಯಿ ಅವರು ಈ ಹಿಂದೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷರು ಆಗಿದ್ದರು. ಆದರೆ, ಪದ್ಮಾವತಿ ಅವರಿಗೆ ಇದು ಮೊದಲ ಚುನಾವಣೆಯಾಗಿದೆ. ಅಣ್ಣ-ತಮ್ಮಂದಿರು ತಮ್ಮ ಪತ್ನಿಯರ ಮೂಲಕ ರಾಜಕೀಯ ರಂಗ ಪ್ರವೇಶಕ್ಕೆ ಮುನ್ನುಡಿ ಬರೆದುಕೊಳ್ಳುತ್ತಿರುವುದು ರಾಜಕೀಯದ ಲೆಕ್ಕಾಚಾರ.