Posts Slider

Karnataka Voice

Latest Kannada News

ಗ್ರಾಮ ಪಂಚಾಯತಿ ಚುನಾವಣೆ ಡಿಸೆಂಬರ್ 22, 27ರಂದು

1 min read
Spread the love

ಚುನಾವಣೆಯು ಎರಡು ಹಂತದಲ್ಲಿ ನಡೆಯಲಿದ್ದು, ಇಂದಿನಿಂದಲೇ ಚುನಾವಣೆ ನೀತು ಸಂಹಿತೆ ಜಾರಿಯಾಗಲಿದೆ. ಡಿಸೆಂಬರ್ 22ರಂದು ಹಾಗೂ 27ರಂದು ಚುನಾವಣೆ ಎರಡು ಹಂತದಲ್ಲಿ ನಡೆಯಲಿದೆ ಎಂದು ಅಧಿಕೃತವಾಗಿ ಚುನಾವಣಾ ಆಯೋಗ ಘೋಷಿಸಿದೆ.

ರಾಜ್ಯದ 30 ಜಿಲ್ಲೆಗಳ ಗ್ರಾಮ ಪಂಚಾಯತಿ ಚುನಾವಣೆ

5762 ಗ್ರಾಮ ಪಂಚಾಯತಿ ಗೆ ಚುನಾವಣೆ

92121 ಸದಸ್ಯರಿಗೆ ಚುನಾವಣೆ ನಡೆಯಲಿದೆ…

ಮೊದಲ ಹಂತದ ಮತದಾನ ದಿನಾಂಕ 22.12.2020

ಎರಡನೇ ಹಂತದ ಮತದಾನ ದಿನಾಂಕ :27.12.2020

ಮತ ಎಣಿಕೆ 30.12.2020

ಬೆಂಗಳೂರು: ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಗ್ರಾಮ ಪಂಚಾಯತಿಗಳ ದಿನಾಂಕವನ್ನ ನಿಗದಿ ಮಾಡಿ ಚುನಾವಣೆ ಆಯೋಗ ಘೋಷಣೆ ಮಾಡಿದ್ದು, ಇನ್ನೂ ಮೇಲಿಂದ ಲೋಕಲ್ ದಂಗಲ್ ಆರಂಭಗೊಳ್ಳಲಿದೆ. ಇದರಿಂದ ರಾಜಕೀಯ ಗಾಳಿ ಮತ್ತೇ ಬೇರು ಮಟ್ಟದಲ್ಲಿ ಗಟ್ಟಿಗೊಳಿಸಲು ಪಕ್ಷಗಳು ಹೆಣಗಾಟ ಆರಂಭಗೊಳ್ಳಲಿದೆ.

ಎರಡು ಹಂತಗಳಲ್ಲಿ ಚುನಾವಣೆಗಳು ನಡೆಯಲಿದ್ದು, ಕಳೆದ ಎಂಟು ತಿಂಗಳ ಹಿಂದೆ ಗ್ರಾಮ ಪಂಚಾಯತಿಯ ಅವಧಿ ಮುಗಿದಿತ್ತು. ತದನಂತರ ಪಂಚಾಯತಿಗಳಿಗೆ ಆಡಳಿತಾಧಿಕಾರಿಯನ್ನ ನೇಮಕ ಮಾಡಿ ಆದೇಶ ಹೊರಡಿತ್ತು ಸರಕಾರ. ಕೊರೋನಾ ಹಿನ್ನೆಲೆಯಲ್ಲಿ ಪಂಚಾಯತಿ ಚುನಾವಣೆಗಳನ್ನ ಮುಂದೂಡಲಾಗಿತ್ತು.

ಗ್ರಾಮೀಣ ಪ್ರದೇಶದಲ್ಲಿ ಆಡಳಿತ ಇಲ್ಲದೇ ಇರುವುದು ಕೂಡಾ, ಅಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿ ಬೀಳುವ ಜೊತೆಗೆ ಸಂಕಷ್ಟಗಳು ಹೆಚ್ಚಾಗಿದ್ದವು. ಇದೀಗ ಎಲ್ಲವಕ್ಕೂ ಸಮಯ ಕೂಡಿ ಬಂದಿದ್ದು, ಚುನಾವಣೆ ಘೋಷಣೆ ಆಗಿದ್ದರಿಂದ ಹೊಸಬರು ಪಂಚಾಯತಿಗಳಿಗೆ ಬರಲು ತುದಿಗಾಲ ಮೇಲೆ ನಿಂತಿದ್ದಾರೆ.

ರಾಷ್ಟ್ರೀಯ ಪಕ್ಷಗಳು ಕೂಡಾ, ಸ್ಥಳೀಯವಾಗಿ ತಮ್ಮ ಪ್ರಾಬಲ್ಯವನ್ನ ಹೆಚ್ಚಿಸುವ ಉದ್ದೇಶದಿಂದ ತಮ್ಮದೇ ಪಕ್ಷದ ಅಭ್ಯರ್ಥಿಗಳನ್ನ ಗೆಲ್ಲಿಸಲು ಮುಂದಾಗುವುದು ರೂಢಿ. ಈಗಾಗಲೇ ಭಾರತೀಯ ಜನತಾ ಪಕ್ಷ ಸ್ಥಳೀಯ ಪಂಚಾಯತಿ ಚುನಾವಣೆಗಳಲ್ಲೂ ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದೆ.


Spread the love

Leave a Reply

Your email address will not be published. Required fields are marked *