ಒಂದೂರು ನಾಲ್ಕು ವಾರ್ಡ್: 13 ಮೆಂಬರ್- 51 ಲಕ್ಷ: ಹೊಡೀರಿ ಹಲಗಿ..
1 min read
ಬಳ್ಳಾರಿ: ಇದು ಪ್ರಜಾಪ್ರಭುತ್ವದ ವ್ಯವಸ್ಥೆ. ಜನರ ಮತಗಳನ್ನ ಪಡೆದು ಜನಪ್ರತಿನಿಧಿಯಾಗಿ ಜನಸೇವೆ ಮಾಡುವವರ ಹೊಸ ಪರಿಚಾರಿಕೆ. ಮತ ಕೇಳುವ ಹಾಗಿಲ್ಲ, ಓಟು ಹಾಕುವುದೂ ಇಲ್ಲ. ಕೇವಲ ಹಣ.. ಹಣ.. ಮತ್ತೂ ಹಣ. ಎಲ್ಲವೂ ನಡೆಯುವುದು ಮತ್ತದೇ ದೇವರ ಹೆಸರಿನಲ್ಲಿ. ದೇವರ ಹೆಸರಿನಲ್ಲಿ ಹಣ ಕೊಟ್ಟು, ಸರಕಾರದ ಕೆಲಸ ದೇವರ ಕೆಲಸ ಎಂದು ಕಾರ್ಯ ಮಾಡಲು ಮುಂದಾಗುವವರ ಸ್ಥಿತಿಯಿದು.
ಹರಾಜು ನಡೆಸಿ ಕೇಕೆ ಹಾಕಿದೆ ವೀಡಿಯೋ ಇಲ್ಲಿದೆ ನೋಡಿ..
ನಾವೂ ಹೇಳಲು ಹೊರಟಿರುವುದು ಬಳ್ಳಾರಿ ಜಿಲ್ಲೆಯ ಬೈಲೂರು ಗ್ರಾಮದ ಗ್ರಾಮ ಪಂಚಾಯತಿ ಚುನಾವಣೆಯ ಹಣೆಬರಹವಿದು. ಇಲ್ಲಿ ಎಲ್ಲವೂ ನಡೆದದ್ದು ಕೇವಲ ಹರಾಜಿನಿಂದ. ಗ್ರಾಮದ ಎಲ್ಲ ವಾರ್ಡುಗಳ ಸದಸ್ಯತ್ವಗಳು ಲಕ್ಷ ಲಕ್ಷ ರೂಪಾಯಿಗೆ ಹರಾಜು ಆಗಿವೆ.
ಬೈಲೂರು ಗ್ರಾಮದ ವಾರ್ಡ್ ಸಂಖ್ಯೆ 2ರಲ್ಲಿ ಎಸ್ಟಿ ಮಹಿಳೆಯಾದ ದುರುಗಮ್ಮ ದಾಸಪ್ಪನವರ ಬರೋಬ್ಬರಿ 5ಲಕ್ಷ 70 ಸಾವಿರ ಕೊಟ್ಟು ಸದಸ್ಯರಾಗಲಿದ್ದಾರೆ. ವಾರ್ಡ್ ಸಂಖ್ಯೆ 3ರಲ್ಲಿ ಸಾಮಾನ್ಯ ಸ್ಥಾನಕ್ಕೆ ಎಚ್.ವೆಂಕಟರೆಡ್ಡಿ ಐದೂವರೆ ಲಕ್ಷ ರೂಪಾಯಿ ನೀಡಿ ಸದಸ್ಯರಾಗಲಿದ್ದಾರೆ.
ಎಲ್ಲ ವಾರ್ಡಗಳಲ್ಲಿ ಎಲ್ಲ ಸ್ಥಾನಗಳು ಆಯಾ ವರ್ಗದ ಆಧಾರದ ಮೇಲೆ ಹರಾಜಾಗಿದ್ದು, ಒಟ್ಟು 51 ಲಕ್ಷ 20ಸಾವಿರ ಜಮಾವಣೆ ಆಗಿದೆ. ಇದು ಪ್ರಜಾಪ್ರಭುತ್ವದ ವ್ಯವಸ್ಥೆ.