ಮನೆಯವರೇ ವದಂತಿ ಹಬ್ಬಿಸಿದ್ರು. ಮಗಳು ಫಾಸ್ಟರನನ್ನೇ ಮದುವೆಯಾದ್ಲು: ಆಕೆಯ ವೀಡಿಯೋ ವೈರಲ್..
1 min read
ಬಳ್ಳಾರಿ: ತನ್ನ ಜೊತೆ ಫಾಸ್ಟರ್ ಅಕ್ರಮ ಸಂಬಂಧವಿದೆ ಎಂದು ವದಂತಿ ಹಬ್ಬಿಸಿದ್ದನ್ನ ಯುವತಿಯೋರ್ವಳು ಮದುವೆ ಮಾಡಿಕೊಂಡು ‘ಪ್ರೂ’ ಮಾಡಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಕೆಲಸಕ್ಕೆ ಹೋಗುತ್ತಿದ್ದ ಯುವತಿ ಕಳೆದ ನಾಲ್ಕು ವರ್ಷದಿಂದ ಚರ್ಚಗೆ ಹೋಗುತ್ತಿದ್ದಳಂತೆ. ಅಲ್ಲಿಗೆ ಹೋಗದಂತೆ ತಿಳಿ ಹೇಳಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಯುವತಿಯ ಹೆಸರನ್ನ ಕೆಡಿಸಲು ಪೋಷಕರೇ ವದಂತಿಗಳನ್ನ ಹಬ್ಬಿಸಿದ್ರಂತೆ ಎಂದು ವೈರಲ್ ಆಗಿರುವ ವೀಡಿಯೋದಲ್ಲಿ ಫಾಸ್ಟರ್ ರವಿಕುಮಾರನನ್ನ ಮದುವೆಯಾದ ಶ್ವೇತಾ ಹೇಳಿಕೊಂಡಿದ್ದಾಳೆ.
ಬಳ್ಳಾರಿಯ ಗುಗ್ಗರಗಟ್ಟಿಯ ನಿವಾಸಿಯಾಗಿದ್ದ ಶ್ವೇತ ಇದೀಗ ಫಾಸ್ಟರ್ ಸಮೇತ ಬೇರೆ ಊರಿಗೆ ಹೋಗಿದ್ದಾಗಿ ಹೇಳಿಕೊಂಡಿದ್ದಾಳೆ. ತಾನೇ, ವಿಚ್ಚೇದಿತ ಫಾಸ್ಟರನ್ನ ಕಾಡಿ ಬೇಡಿ ಮದುವೆಯಾಗಿದ್ದಾಗಿ ವೀಡಿಯೋದಲ್ಲಿ ಮಾತನಾಡಿದ್ದಾಳೆ.
50 ವರ್ಷದ ಫಾಸ್ಟರ್ ರವಿಕುಮಾರ ನನ್ನ ಗಂಡ. ನಮಗೆ ನನ್ನ ಮನೆಯವರಿಂದ ರಕ್ಷಣೆ ಕೊಡಿ ಎಂದು ಬೇಡಿಕೊಂಡಿದ್ದಾಳೆ. ಇದೇಲ್ಲದರ ನಡುವೆ ಫಾಸ್ಟರ್ ಮದುವೆ ಪ್ರಕರಣ ಜಿಲ್ಲೆಯಾಧ್ಯಂತ ದೊಡ್ಡ ಸುದ್ದಿಯಾಗಿದೆ.