Posts Slider

Karnataka Voice

Latest Kannada News

ಗುರುವಿನ‌ ನೆರಳಲ್ಲಿ ಗುರಿ ಸಾಧಿಸಿರಿ: ಇ.ಓ ಗಂಗಾಧರ ಕಂದಕೂರ

1 min read
Spread the love

ಹುಬ್ಬಳ್ಳಿ: ವಿದ್ಯಾರ್ಥಿಗಳು  ಜೀವನದ ಉನ್ನತ ಗುರಿಗಳನ್ನು ಸಾಧಿಸಲು ಸತತ ಶ್ರದ್ಧೆಯಿಂದ ಅಧ್ಯಯನ ಕೈಗೊಂಡು, ಸದಾ ಕಾಲ ಗುರುಗಳಿಗೆ ವಿಧೆಯರಾಗಿದ್ದು‌, ಅವರ ನೆರಳಿನಲ್ಲಿ ಬದುಕಿನ ನೆಲೆ ಕಾಣಬೇಕೆಂದು  ತಾಲೂಕಾ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ ಕಂದಕೂರ ಹೇಳಿದರು.

ಸ್ಥಳೀಯ ಗ್ರಾಮೀಣ ವಲಯದ ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಆಯೋಜಿಸಲಾದ ಕಳೆದ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗಳಲ್ಲಿ ತಾಲೂಕಾ ಹಂತದಲ್ಲಿ ಅತೀ ಹೆಚ್ಚು ಅಂಕ ಪಡೆದಿರುವ ಸರಕಾರಿ ಪ್ರೌಢ ಶಾಲೆಗಳ ವಿದ್ಯಾರ್ಥಿಗಳಿಗೆ ಇಲಾಖೆಯಿಂದ ಕೊಡಲಾಗುವ ಲ್ಯಾಪ್ ಟಾಪ್ ಗಳನ್ನು ವಿತರಿಸಿ ಮಾತನಾಡಿದ ಅವರು, ಪ್ರತಿಭೆಯ ಪ್ರಭೆ ನಿರಂತರವಾಗಿರಬೇಕಾಗಿದ್ದು, ವಿದ್ಯಾರ್ಥಿಗಳು ಆದರ್ಶ ಜೀವನ ಮೌಲ್ಯಗಳೊಂದಿಗೆ ಸಮಾಜಕ್ಕೆ ಮಾದರಿಯಾದ ವ್ಯಕ್ತಿಗಳಾಗಬೇಕೆಂದು ಹೇಳಿದರು.

ಕ್ಷೇತ್ರಶಿಕ್ಷಣಾಧಿಕಾರಿ ಅಶೋಕ ಕುಮಾರ ಸಿಂದಗಿ ಮಾತನಾಡಿ, ಸರಕಾರದ ಸೌಲಭ್ಯಗಳು ವಿಪುಲವಾಗಿದ್ದು, ಅವುಗಳ ಸಮರ್ಪಕ ಸದ್ಬಳಕೆ ಮಾಡಿಕೊಂಡು, ಯಶಸ್ಸು ಪಡೆಯಲು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸದಾ ಬದ್ಧರಾಗಿರಬೇಕೆಂದರು.

ನೂತನವಾಗಿ ತಾಲೂಕಾ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡ ಗಂಗಾಧರ ಕಂದಕೂರ ರವರನ್ನು, ವಲಯಕ್ಕೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ರೋಟರಿ ಶಾಲೆಯ ವಿದ್ಯಾರ್ಥಿ ಶ್ರೀಷಾ ಬುದ್ಯಾ ರವರನ್ನು ಸನ್ಮಾನಿಸಲಾಯಿತು

ಕಾರ್ಯಕ್ರಮದಲ್ಲಿ ತಾಲೂಕಾ ಪಂಚಾಯತಿಯ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಶ್ರೀಧರ ಪತ್ತಾರ,  ತಾಲೂಕಾ  ದೈಹಿಕ ಶಿಕ್ಷಣ ಪರಿವೀಕ್ಷಕ ಕೆ.ಎಚ್.ಗುಂಡಾರ, ಮುಖ್ಯಶಿಕ್ಷಕ  ರವಿಕುಮಾರ ಮಾಣಿಕನವರ, ಎಸ್.ಬಿ.ಗುಳೇರ,‌ ಕಚೇರಿ ಅಧೀಕ್ಷರ ಎಂ.ಎಸ್.ಹೆಬಸೂರ,  ಶಿಕ್ಷಣ ಸಂಯೋಜಕ ಎಸ್.ಎಸ್.ಜಡಿಮಠ, ಆರ್.ಬಿ.ಪಾಟೀಲ, ಶರಣು ಪಟ್ಟೇದ, ಸರಕಾರಿ ಪ್ರೌಢ ಶಾಲೆಗಳ ಮುಖ್ಯಶಿಕ್ಷಕರು  ಸಿ.ಆರ್.ಪಿ ಗಳು ಮತ್ತು ಕಚೇರಿ‌ ಸಿಬ್ಬಂದಿ ಉಪಸ್ಥಿತರಿದ್ದರು. ಶಿಕ್ಷಣ ಸಂಯೋಜಕ  ಎಸ್.ಎಸ್.ಜಡಿಮಠ ನಿರೂಪಿಸಿದರು.ಆರ್.ಬಿ.ಪಾಟೀಲ ಸ್ವಾಗತಿಸಿದರು. ಕೆ.ಎಚ್.ಗುಂಡಾರ ವಂದಿಸಿದರು.

 

ಲ್ಯಾಪ್ ಟಾಪ್ ವಿಜೇತರು

1.ಪವಿತ್ರಾ ಮೂಡಲವರ

ಸರಕಾರಿ ಪ್ರೌಢ ಶಾಲೆ ನವನಗರ

2.ವೈಷ್ಣವಿ ದಾನಪ್ಪಗೌಡ್ರ

ಸರಕಾರಿ ಪ್ರೌಢ ಶಾಲೆ ಅದರಗುಂಚಿ

3.ಸುಷ್ಮಾ ಹೂಲಿಕಟ್ಟಿ

ಸರಕಾರಿ ಪ್ರೌಢ ಶಾಲೆ ಕಿರೇಸೂರ


Spread the love

Leave a Reply

Your email address will not be published. Required fields are marked *