Posts Slider

Karnataka Voice

Latest Kannada News

DYSP ಆತ್ಮಹತ್ಯೆ: ಪೊಲೀಸ್ ಇಲಾಖೆಯಲ್ಲಿ ಮತ್ತೊಂದು ಪ್ರಕರಣ

1 min read
Spread the love

ಬೆಂಗಳೂರು: ಸ್ನೇಹಿತರ ಮನೆಯಲ್ಲಿ ಪಾರ್ಟಿ ಮುಗಿಸಿ ತಡರಾತ್ರಿ ಗೆಳೆಯನ ಮನೆಯಲ್ಲಿಯೇ ಡಿವೈಎಸ್ಪಿಯೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಅನ್ನಪೂರ್ಣೇಶ್ವರಿ ನಗರದ ವಿನಾಯಕ ಲೇ ಔಟನಲ್ಲಿ ಬೆಳಕಿಗೆ ಬಂದಿದೆ.


ಸಿಐಡಿಯಲ್ಲಿ ಡಿವೈಎಸ್ಪಿಯಾಗಿದ್ದ ಲಕ್ಷ್ಮೀ ಎನ್ನುವವರೇ ಆತ್ಮಹತ್ಯೆ ಮಾಡಿಕೊಂಡಿದ್ದು, ಸುಮಾರು ಹೊತ್ತಿನವರೆಗೆ ಸ್ನೇಹಿತರೊಂದಿಗೆ ಹರಟೆ ಹೊಡೆದು ಮಲಗಲು ತೆರಳಿದಾಗಲೇ ಆತ್ಮಹತ್ಯೆಗೆ ಶರಣಾಗಿರಬಹುದೆಂದು ಶಂಕಿಸಲಾಗಿದೆ.
ಗೆಳೆಯನ ಮನೆಯ ಕೊಠಡಿಯೊಳಗೆ ಹೋಗಿ ಬಹಳ ಹೊತ್ತಿನವರೆಗೆ ಬಾರದೇ ಇದ್ದಾಗ, ಬಾಗಿಲು ತೆರೆದಿರಲಿಲ್ಲ. ಹೀಗಾಗಿ ಬಾಗಿಲು ಮುರಿದು ಒಳಗೆ ಹೋದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.
ಡಿವೈಎಸ್ಪಿ ಲಕ್ಷ್ಮೀ ಅವರನ್ನ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿತ್ತಾದರೂ, ಯಾವುದೇ ಪ್ರಯೋಜನವಾಗಿಲ್ಲ. ಹಲವು ವರ್ಷಗಳ ಹಿಂದೆ ಮದುವೆಯಾಗಿದ್ದರೂ ಮಕ್ಕಳು ಆಗದೇ ಇರುವುದೇ ಆತ್ಮ ಹತ್ಯೆಗೆ ಕಾರಣ ಎಂದು ಶಂಕಿಸಲಾಗಿದೆ.
ಮನು ಕಾಂಟ್ರೆಕ್ಟ್ ವೃತ್ತಿಯಲ್ಲಿ ತೊಡಗಿದ್ದವನು. ಬುಧವಾರ ಅಂದರೆ ನಿನ್ನೆ ಸಂಜೆ ಊಟಕ್ಕೆಂದು ಸ್ನೇಹಿತನ ಮನೆಗೆ ಡಿಎಸ್​ಪಿ ಲಕ್ಷ್ಮೀ ಬಂದಿದ್ದರು. ಅಧಿಕಾರಿ ಲಕ್ಷ್ಮಿ ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದರು. ಅವರ ಪತಿ ಹೊರ ರಾಜ್ಯದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. 8 ವರ್ಷವಾದರೂ ಇವರಿಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

ಲಕ್ಷ್ಮಿ 2014ರ ಕೆಎಸ್, ಪಿಎಸ್ ಬ್ಯಾಚ್​ನ ಅಧಿಕಾರಿಯಾಗಿದ್ದವರು. 2017ರಲ್ಲಿ ಕರ್ತವ್ಯಕ್ಕೆ ನಿಯೋಜನೆಯಾಗಿದ್ದರು. ಆಪ್ತ ಸ್ನೇಹಿತನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲೇ ಶವ ಪತ್ತೆಯಾಗಿದೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *