ಸರಕಾರಿ ನೌಕರನಾಗುವ ಕನಸು ಕಂಡಿದ್ದ ಕೆಎಸ್ಸಾರ್ಟಿಸಿ ಚಾಲಕ ಹೃದಯಾಘಾತದಿಂದ ಸಾವು
1 min read
ಚಿಕ್ಕಮಗಳೂರು: ಸಾರಿಗೆ ನೌಕರರ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ ಇಂದು ಸೇವೆಗೆ ಹಾಜರಾಗಲು ಡೀಪೋದ ಬಳಿ ಬಂದಾಗಲೇ ಹೃದಯಾಘಾತದಿಂದ ಚಾಲಕನೋರ್ವ ಮೃತಪಟ್ಟ ಘಟನೆ ಕೆಎಸ್ ಆರ್ ಟಿಸಿ ಡೀಪೊದ ಬಳಿ ಸಂಭವಿಸಿದೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ನಿವಾಸಿಯಾಗಿದ್ದ ಜಮೀಲ ಎಂಬ ಚಾಲಕರೇ ಸಾವಿಗೀಡಾಗಿದ್ದು, ಕರ್ತವ್ಯಕ್ಕೆ ಹಾಜರಾದ ಸಮಯದಲ್ಲೇ ಈ ಅವಘಡ ಸಂಭವಿಸಿದ್ದು, ನೌಕರರಲ್ಲಿ ತಳಮಳ ಮೂಡಿಸಿದೆ.
48 ವಯಸ್ಸಿನ ಜಮೀಲ್ ಕಳೆದ 16 ವರ್ಷದಿಂದ ಸಾರಿಗೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ಮೂರು ದಿನದಿಂದ ನಡೆದಿದ್ದ ಸಾರಿಗೆ ನೌಕರರ ಹೋರಾಟದಲ್ಲೂ ಭಾಗಿಯಾಗಿ, ತಾವೂ ಸರಕಾರಿ ನೌಕರರು ಆಗುತ್ತೇವೆಂದು ಕನಸು ಕಂಡಿದ್ದರು.
ಜಮೀಲ್ ಅವರ ಈ ಘಟನೆಯಿಂದ ಚಿಕ್ಕಮಗಳೂರು ಸಾರಿಗೆ ನೌಕರರು ಕಣ್ಣೀರಾಗಿದ್ದು, ಕುಟುಂಬಕ್ಕೆ ಈ ನೋವನ್ನ ಭರಿಸುವ ಶಕ್ತಿಯನ್ನ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.