ಕಳೆದುಕೊಂಡ ಕರಿಯಾ : ಪ್ಲೀಸ್ ಹುಡುಕಿ.. ಬೇಕಿದ್ರೇ ಐದು ಸಾವಿರ ಬಹುಮಾನ ಕೊಡ್ತಾರಂತೆ..!
1 min read
ಧಾರವಾಡ: ಆ ಮನೆಯವರು ಹೊರಗೆ ಹೊರಟರೇ ‘ಅದು’ ಅವರನ್ನ ಕಳಿಸಿಕೊಡಲು ಹಿಂದೆ ಹಿಂದೆ ಹೋಗುತ್ತಿತ್ತು. ವಾಹನದಲ್ಲಿ ಹೊರಟರೇ ದೊಡ್ಡದೊಂದು ಜಾತ್ರೆಗೆ ಹೊರಟಂತೆ ಸಿದ್ಧವಾಗುತ್ತಿತ್ತು. ಮಾಲೀಕರನ್ನ ಕಂಡರೇ ಮುಗಿದೇ ಹೋಯಿತು.. ಅದರ ಆದರವೇ ಬೇರೆಯಾಗುತ್ತಿತ್ತು.
ನಿಜಾ.. ಅದರ ಪ್ರೀತಿಯೇ ಅಂತಹದ್ದು. ಅದನ್ನ ಸಾಕಿದ ಮನೆಯವರು ಪ್ರತಿ ಕ್ಷಣವೂ ಅದರ ಪ್ರೀತಿಯಲ್ಲೇ ಮನಸ್ಸನ ಮುದಗೊಳಿಸಿಕೊಳ್ಳುತ್ತಿದ್ದರು. ಆದರೆ, ಅದೀಗ ಕಾಣೆಯಾಗಿದೆ. ಅದರ ಜೊತೆಗೆ ಮನೆಯ ಖುಷಿಯೂ ಮಾಯವಾಗಿದೆ.
ಅದನ್ನ ಪ್ರೀತಿಯಿಂದ ಮನೆಯಲ್ಲಿ ಕರಿಯಾ ಎಂದು ಕರೆಯುತ್ತಿದ್ದರು. ಮನೆಯವರು ಯಾವತ್ತೂ ಅದನ್ನ ನಾಯಿ ಅನ್ನೋದಾಗಲಿ, ಶ್ವಾನವೆನ್ನುವುದಾಗಲಿ ಮಾಡಲೇ ಇಲ್ಲ. ಅಷ್ಟೇ ಅಲ್ಲ, ಅದನ್ನ ಮಗುವಿನಂತೆ ಜೋಕಾಲಿಯಾಡಿಸಿ, ಪ್ರೀತಿಸುತ್ತಿದ್ದರು.
ಕೆಲವು ದಿನಗಳಿಂದ ಕಾಣೆಯಾಗಿರುವ ಕರಿಯನ ವಯಸ್ಸು ನಾಲ್ಕೂವರೆ ತಿಂಗಳು. ಎಲ್ಲಿಯಾದರೂ ಕಂಡರೇ ಇದರಲ್ಲಿರುವ ನಂಬರಗೆ ಕಾಲ್ ಮಾಡಿ, ಪುಣ್ಯಕಟ್ಟಿಕೊಳ್ಳಿ. ಹಾಗೇ ಮಾಡಿದ್ರೇ ನಿಮ್ಮನ್ನ ಬರೀಗೈಯಲ್ಲಿ ಕಳಿಸೋದಿಲ್ಲ…