ಧಾರವಾಡ ಜಿಪಂ ವಿವಿಧ ಸ್ಥಾಯಿ ಸಮಿತಿಗಳಿಗೆ ಅವಿರೋಧ ಆಯ್ಕೆ
1 min read
ಧಾರವಾಡ: ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಧಾರವಾಡ ಜಿಲ್ಲಾ ಪಂಚಾಯತದ (5) ಸ್ಥಾಯಿ ಸಮಿತಿಗಳಿಗೆ ಮೂರನೇ ಅವಧಿಗೆ ಸದಸ್ಯರ ಆಯ್ಕೆ ಹಾಗೂ ಮೂರು ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರುಗಳ ಆಯ್ಕೆ ಕುರಿತು ಜರುಗಿದ ಚುನಾವಣಾ ಸಭೆಯಲ್ಲಿ ಐದು ಸ್ಥಾಯಿ ಸಮಿತಿಗಳಿಗೆ ಸದಸ್ಯರು ಹಾಗೂ ಮೂರು ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ: ಸುಶೀಲಾ.ಬಿ ಪ್ರಕಟಣೆಯಲ್ಲಿ ತಿಳಿಸಿದರು.
ಸಾಮಾನ್ಯ ಸ್ಥಾಯಿ ಸಮಿತಿಗೆ ಸದಸ್ಯರಾಗಿ ಕರಿಯಪ್ಪ ನಾಗಪ್ಪ ಮಾದರ, ಭಾವನಾ ಕಲ್ಮೇಶ, ಬೇಲೂರ ಚನ್ನಬಸಪ್ಪ ಬಸಪ್ಪ ಮಟ್ಟಿ, ಅಂದಾನಯ್ಯ ಬಸಲಿಂಗಯ್ಯ ಹಿರೇಮಠ, ರೇಣುಕಾ ಹನಮಪ್ಪ ಇಬ್ರಾಹಿಂಪೂರ ಆಯ್ಕೆಯಾಗಿದ್ದಾರೆ.
ಹಣಕಾಸು ಮತ್ತು ಲೆಕ್ಕ ಪರಿಶೋಧನಾ ಮತ್ತು ಯೋಜನಾ ಸ್ಥಾಯಿ ಸಮಿತಿ ಸದಸ್ಯರಾಗಿ ವಿದ್ಯಾ ಸುರೇಶಗಿರಿ ಭಾವಾನವರ, ರೇಣುಕಾ ಹನಮಪ್ಪ ಇಬ್ರಾಹಿಂಪೂರ, ಚನ್ನವ್ವ ಬಸನಗೌಡ ಶಿವನಗೌಡ್ರ, ನಾಗನಗೌಡ ನಿಂಗನಗೌಡ ಪಾಟೀಲ, ಕಲ್ಲಪ್ಪ ಚನ್ನಬಸಪ್ಪ ಪುಡಕಲಕಟ್ಟಿ, ನಿಂಗಪ್ಪ ಘಾಟಿನ ಆಯ್ಕೆಯಾಗಿದ್ದಾರೆ.
ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಸದಸ್ಯರಾಗಿ ಚನ್ನಬಸಪ್ಪ ಬಸಪ್ಪ ಮಟ್ಟಿ, ಚೈತ್ರಾ ಗುರುಪಾದಪ್ಪ ಶಿರೂರ, ನಿಂಗಪ್ಪ ಘಾಟಿನ, ಭರಮಪ್ಪ ಫಕ್ಕೀರಪ್ಪ ಮುಗಳಿ, ಕರಿಯಪ್ಪ ನಾಗಪ್ಪ ಮಾದರ, ಕಲ್ಲಪ್ಪ ಚನ್ನಬಸಪ್ಪ ಪುಡಕಲಕಟ್ಟಿ ಆಯ್ಕೆಯಾಗಿದ್ದಾರೆ.
ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಸದಸ್ಯರಾಗಿ ಚನ್ನವ್ವ ಬಸನಗೌಡ ಶಿವನಗೌಡ್ರ, ಅಂದಾನಯ್ಯ ಬಸಲಿಂಗಯ್ಯ ಹಿರೇಮಠ, ವಿದ್ಯಾ ಸುರೇಶಗಿರಿ ಭಾವಾನವರ, ಗಾಯಿತ್ರಿ ಸಂಜೀವರೆಡ್ಡಿ ರಾಯರೆಡ್ಡಿ, ಈರವ್ವ ಯಲ್ಲಪ್ಪ ದಾಸನಕೊಪ್ಪ ಆಯ್ಕೆಯಾಗಿದ್ದಾರೆ.
ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಸದಸ್ಯರಾಗಿ ಉಮೇಶ ಊರ್ಫ್ ಯಲ್ಲಪ್ಪ ರಾಮಪ್ಪ ಹೆಬಸೂರ, ಭಾವನಾ ಕಲ್ಮೇಶ ಬೇಲೂರ, ಭರಮಪ್ಪ ಫಕ್ಕೀರಪ್ಪ ಮುಗಳಿ, ನಾಗನಗೌಡ ನಿಂಗನಗೌಡ ಪಾಟೀಲ, ಗಾಯಿತ್ರಿ ಸಂಜೀವರೆಡ್ಡಿ ರಾಯರೆಡ್ಡಿ, ಚೈತ್ರಾ ಗುರುಪಾದಪ್ಪ ಶಿರೂರ ಆಯ್ಕೆಯಾಗಿದ್ದಾರೆ.
ಮತ್ತು ಮೂರು ಸ್ಥಾಯಿ ಸಮಿತಿಗಳಾದ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ ಭರಮಪ್ಪ ಫಕ್ಕೀರಪ್ಪ ಮುಗಳಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಗೆ ಈರವ್ವ ಯಲ್ಲಪ್ಪ ದಾಸನಕೊಪ್ಪ ಮತ್ತು ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಗೆ ಉಮೇಶ ಊರ್ಫ್ ಯಲ್ಲಪ್ಪ ರಾಮಪ್ಪ ಹೆಬಸೂರ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ