Karnataka Voice

Latest Kannada News

ಧಾರವಾಡದಲ್ಲಿ ಪೊಲೀಸರ ಮಾರುವೇಷ ಕಾರ್ಯಾಚರಣೆ… ‘ಮಜ್ನು’ಗಳ ಸ್ಥಿತಿ ಅಯೋಮಯ…

1 min read
Spread the love

ಧಾರವಾಡ: ಹುಡುಗಿಯರನ್ನ ಪಟಾಯಿಸಲು ತರಹೇವಾರಿ ಡ್ರಾಮಾ ಮಾಡುವ ರೋಡ್ ರೋಮಿಯೋಗಳಿಗೆ ಸಂಚಾರಿ ಠಾಣೆಯ ಪೊಲೀಸರು ‘ಭಾರೀ’ ಪಾಠ ಕಲಿಸಿದ್ದು, ರಸ್ತೆರಾಜರು ಪತರುಗುಟ್ಟಿದ್ದಾರೆ.

ಹೌದು… ಇದಕ್ಕೇಲ್ಲ ಕಾರಣವಾಗಿದ್ದು ಧಾರವಾಡ ಸಂಚಾರಿ ಠಾಣೆಯ ಇನ್ಸಪೆಕ್ಟರ್ ಮಲ್ಲನಗೌಡ ನಾಯ್ಕರ ಅವರ ಐಡಿಯಾ. ಅದಕ್ಕಾಗಿಯೇ ರೆಡಿಯಾಗಿದ್ದು ಮಾರುವೇಷದಲ್ಲಿ ಪೊಲೀಸ್ ಪಡೆ. ಉಸ್ತುವಾರಿ ವಹಿಸಿದ್ದು ಎಎಸ್ಐ ವಿರೇಶ ಬಳ್ಳಾರಿ ಆ್ಯಂಡ್ ಟೀಂ.

ಧಾರವಾಡದ ಸಪ್ತಾಪುರದಲ್ಲಿರುವ ಪ್ರಮುಖ ಸ್ಥಳಗಳಲ್ಲಿ ಚೆಲುವೆಯರ ಮನಗೆಲ್ಲಲು ಬೈಕ್ ಸೈಲೇನ್ಸರ್ ಶಬ್ದವನ್ನ ಬದಲಿಸಿ ಕಿರಿ ಕಿರಿಯುಂಟು ಮಾಡುತ್ತಿದ್ದರು. ಅಷ್ಟೇ ಅಲ್ಲ, ನಂಬರ ಪ್ಲೇಟ್ ಕಾಣದಂತೆ ಹಗ್ಗವನ್ನ ಕಟ್ಟಿ ಅಲೆದಾಡುತ್ತಿದ್ದರು. ಇದೇ ಸಮಯದಲ್ಲಿ ಸಾಮಾನ್ಯರಂತೆ ನಿಂತಿದ್ದ ಮಾರುವೇಷದ ಪೊಲೀಸ್ ಪಡೆ, ನಾಲ್ಕು ಬೈಕ್‌ಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಡಿ.ವಿ.ಗಾಳರೆಡ್ಡಿ, ಹನಮಂತಪ್ಪ ರೊಳ್ಳಿ ಹಾಗೂ ಅಷ್ಪಾಕ ಬಡಾಕಾಶಪ್ಪನವರ ಭಾಗವಹಿಸಿದ್ದರು.


Spread the love

Leave a Reply

Your email address will not be published. Required fields are marked *