ಧಾರವಾಡ ಸ್ವಾಮೀಜಿಯ ದಾಖಲೆಯ ಉರುಳು ಸೇವೆ- ಎಷ್ಟು ಕಿಲೋಮೀಟರನಿಂದ ಬರುತ್ತಿದ್ದಾರೆ ಗೊತ್ತಾ..!
1 min read
ಧಾರವಾಡ: ಕೊರೋನಾ ಮುಕ್ತ ಸಮಾಜ ಹಾಗೂ ಮಕ್ಕಳ ವಿದ್ಯಾಭ್ಯಾಸ್ ಪುನರ್ ಚೇತನ ಮಾಡುವಂತೆ ಪ್ರಾರ್ಥಿಸಿ ಸ್ವಾಮೀಜಿಯೋರ್ವರು ಬರೋಬ್ಬರಿ 42 ಕಿಲೋಮೀಟರನಿಂದ ಉರುಳು ಸೇವೆ ಮಾಡುತ್ತ ಧಾರವಾಡದತ್ತ ಬರುತ್ತಿದ್ದು, ಭಕ್ತ ಸಮೂಹ ಜೈ ಘೋಷ ಹಾಕುತ್ತ ಅವರೊಂದಿಗೆ ನಡೆಯುತ್ತ ಸಾಗಿದೆ.
https://www.youtube.com/watch?v=se7Ab61PIC8
ಕಲಘಟಗಿ ತಾಲೂಕಿನ ತಬಕದಹೊನ್ನಳ್ಳಿ ಗ್ರಾಮದ ಶ್ರೀ ಆದಿಶಕ್ತಿ ಎಣ್ಣೆ ಹೊಳೆಮ್ಮದೇವಿ ದೇವಸ್ಥಾನದಿಂದ ಆರಂಭಗೊಂಡಿರುವ ಉರುಳು ಸೇವೆಯಲ್ಲಿ ಶ್ರೀ ಮೈಲಾರಲಿಂಗ ಸ್ವಾಮೀಜಿ ಹಾಗೂ ಸ್ವಾಮೀಜಿಯವರ ಶಿಷ್ಯ ರಮೇಶ ಭಾಗವಹಿಸಿದ್ದಾರೆ.
ತಬಕದಹೊನ್ನಳ್ಳಿಯಿಂದ ಆರಂಭಗೊಂಡಿರುವ ಉರುಳು ಸೇವೆಯು ರಾಜೀವಗಾಂಧಿನಗರದ ಬಂಡಾರದ ಒಡೆಯನ ದೇವಸ್ಥಾನದವರೆಗೆ ನಡೆಯಲಿದೆ. ಕಳೆದ ದಿನದಿಂದ ಆರಂಭಗೊಂಡಿರುವ ಈ ಉರುಳು ಸೇವೆ ಇಂದು ಅಂತ್ಯಗೊಳ್ಳುವ ನಿರೀಕ್ಷೆಯಿದೆ.
42 ಕಿಲೋಮೀಟರ್ ಉರುಳು ಸೇವೆ ಮಾಡುವ ಹಿಂದೆ ಕೊರೋನಾ ಸಮಾಜದಿಂದ ತೊಲಗಬೇಕು, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ್ ಪುನರ್ ಚೇತನ ನೀಡಬೇಕು ಹಾಗೂ ರೈತರನ್ನ ಸಂಕಷ್ಟದಿಂದ ದೂರ ಮಾಡಬೇಕೆಂಬ ಸಂಕಲ್ಪದಿಂದ ಸ್ವಾಮೀಜಿಯವರು ಉರುಳು ಸೇವೆ ನಡೆಸುತ್ತಿದ್ದಾರೆ.