ಧಾರವಾಡ ಉಪನಗರ ಠಾಣೆ- 5 ಕಡೆ ಅಂದರ್-ಬಾಹರ್: 42 ಜನರ ಬಂಧನ
1 min read
ಧಾರವಾಡ: ತಮ್ಮ ಲಾಭಕ್ಕಾಗಿ ಅಕ್ರಮವಾಗಿ ಅಂದರ್-ಬಾಹರ್ ಆಡುತ್ತಿದ್ದ ಐದು ಪ್ರದೇಶಗಳಲ್ಲಿ ಉಪನಗರ ಠಾಣೆ ಪೊಲೀಸರು ದಾಳಿ ಮಾಡಿದ್ದು, 42 ಜನರನ್ನ ಬಂಧನ ಮಾಡಿ, ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.
ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯ ನೆಹರುನಗರ, ಎತ್ತಿನಗುಡ್ಡ, ಕೊಪ್ಪದಕೇರಿ, ಮಾಳಾಪೂರ, ಮರಾಠಕಾಲನಿಗಳಲ್ಲಿ ತಮ್ಮಅಕ್ರಮ ಲಾಭಕ್ಕಾಗಿ ಇಸ್ಪೀಟ್ ಎಲೆಗಳಿಂದ ಅಂದರ-ಬಾಹರ ಜೂಜಾಟವಾಡುತ್ತಿದ್ದ 42 ಜನರನ್ನ ಬಂಧನ ಮಾಡಲಾಗಿದೆ.
ಬಂಧಿತರಿಂದ 95290 ರೂಪಾಯಿ ನಗದು, 7 ಮೊಬೈಲ್ ಹಾಗೂ ಇಸ್ಪೀಟ್ ಎಲೆಗಳನ್ನ ವಶಕ್ಕೆ ಪಡೆದು, ಬಂಧಿರ ವಿರುದ್ಧ ಕಾನೂನು ಕ್ರಮವನ್ನ ತೆಗೆದುಕೊಳ್ಳಲಾಗಿದೆ.
ಕಾರ್ಯಾಚರಣೆಯು ಪ್ರಭಾರ ಪೊಲೀಸ್ ಆಯುಕ್ತ ರಾಘವೇಂದ್ರ ಸುಹಾಸ ಮಾರ್ಗದರ್ಶನದಲ್ಲಿ ಇನ್ಸಪೆಕ್ಟರ್ ಪ್ರಮೋದ ಯಲಿಗಾರ ಹಾಗೂ ಪಿಎಸ್ಐ ಶ್ರೀಮಂತ ಹುಣಸಿಕಟ್ಟಿ ನೇತೃತ್ವದ ತಂಡ ದಾಳಿ ಮಾಡಿ, ಈ ಪ್ರಮಾಣದ ಆರೋಪಿಗಳನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಐದು ಕಡೆ ದಾಳಿ ಮಾಡಿ ಆರೋಪಿಗಳನ್ನ ಬಂಧನ ಮಾಡಿರುವ ಇನ್ಸಪೆಕ್ಟರ್, ಸಬ್ ಇನ್ಸಪೆಕ್ಟರ್ ಹಾಗೂ ಸಿಬ್ಬಂದಿಗಳ ಕಾರ್ಯಕ್ಷಮತೆಯನ್ನ ಆಯುಕ್ತರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.