ಧಾರವಾಡ ಹಳೇ ಬಸ್ ನಿಲ್ದಾಣದಲ್ಲಿ ಬೆಳ್ಳಂಬೆಳಿಗ್ಗೆ “ಅವರು”…!
1 min read
ಧಾರವಾಡ: ಒಂದು ಮಾತು ಒಂದೇ ದಿನ ಆಡಿದರೇ, ತೋರಿಸಿದ ಹಾಗೇ ಮಾಡಿ ಮರೆಯೋದೆ ಹೆಚ್ಚು. ಅದನ್ನ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಮಾಡಲ್ಲ. ಬದಲಿಗೆ ಆಡಿದ ಮಾತನ್ನ ನಿರಂತರವಾಗಿ ಉಳಿಸಿಕೊಳ್ಳಲು ತಳಮಟ್ಟದ ಕಾರ್ಯಕರ್ತರು ಸದಾಕಾಲ ಸಿದ್ಧವಾಗಿರುತ್ತಾರೆ. ಅದಕ್ಕೆ ಉದಾಹರಣೆ ಇಲ್ಲಿದೆ ನೋಡಿ..
ಇಂದು ಬೆಳಿಗ್ಗೆ ಧಾರವಾಡ ಹಳೇ ಬಸ್ ನಿಲ್ದಾಣದಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಕ್ತಿ ಹಿರೇಮಠ ನೇತೃತ್ವದಲ್ಲಿ ಸ್ವಚ್ಚತೆ ಕಾರ್ಯ ಆರಂಭಿಸಿದರು. ಪೌರ ಕಾರ್ಮಿಕರು ಬರುವನ್ನ ಮುನ್ನವೇ ಬಸ್ ನಿಲ್ದಾಣವನ್ನ ಕಸ ಗೂಡಿಸಿ ಸ್ವಚ್ಚ ಮಾಡಿದ್ರು.
ಯಾವುದೇ ಫಲಾಫೇಕ್ಷೆಯಿಲ್ಲದೇ ಕಾರ್ಯಕರ್ತರು ತಮ್ಮ ನಾಯಕರು ಹೇಳಿದ ಮಾತನ್ನ ನಿಜಸ್ವರೂಪದಲ್ಲಿ ತಂದು ಕಾರ್ಯ ಮಾಡುವುದು ಜನರ ಮೆಚ್ಚುಗೆಗೆ ಕಾರಣವಾಗತ್ತೆ. ನಂತರದ್ದು ಕಾರ್ಯಕರ್ತರೂ ಮತ್ತೂ ನಾಯಕರದ್ದೂ ಬೇರೆ ಬೇರೆ ಅನ್ನೋದು ಬೇರೆ ಮಾತು ಬಿಡಿ. ಯಾವುದಕ್ಕೂ ಇಂತಹ ಕಾರ್ಯವನ್ನ ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ.
ಇಂದು ನಡೆದ ಸ್ವಚ್ಚತಾ ಅಭಿಯಾನದಲ್ಲಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಕೋಟ್ಯಾನ್, ಸ್ವಚ್ಚತಾ ಅಭಿಯಾನದ ಸಂಚಾಲಕ ವಿನೋದ, ಪ್ರಕಾಶ ಇಂಗಳೆ, ಹಾಷಂ ಬಿಜಾಪೂರ, ಗುರು ತಳವಾರ, ವಿನಯ ಗೊಂದ್ಲಿ, ಉದಯ ಯಂಡಿಗೇರಿ ಸೇರಿದಂತೆ ಹಲವರು ಭಾಗವಹಿಸಿದ್ದರು.