ಮಗು ಅದಲು-ಬದಲು: ಜಿಲ್ಲಾ ಆಸ್ಪತ್ರೆ ಮುಂದೆ ಪ್ರತಿಭಟನೆ
1 min read
ದಾವಣಗೆರೆ: ಜಿಲ್ಲಾಸ್ಪತ್ರೆಯಲ್ಲಿ ಕಳೆದ ರಾತ್ರಿ ಒಂದೇ ಸಮಯದಲ್ಲೇ ಹೆರಿಗೆ ಆದ ಮಗು ಅದಲು ಆದ ಘಟನೆ ನಡೆದಿದೆ. ಇದರಿಂದ ದಾವಣಗೆರೆ ಜಿಲ್ಲಾ ಆಸ್ಪತ್ರೆ ಮುಂದೆ ತೃತೀಯ ಲಿಂಗಿಗಳು ಪ್ರತಿಭಟನೆ ನಡೆಸಿದ್ದಾರೆ.
ನಾರಮ್ಮ ಮತ್ತು ಮಾರಮ್ಮ ಹೆಸರು ಕೇಳಿಸಿಕೊಳ್ಳುವಾಗ ಆದ ಎಡವಟ್ಟಿನಿಂದ ಮಗು ಅದಲು ಬದಲು ಆಗಿತ್ತು. ಬಳ್ಳಾರಿ ಜಿಲ್ಲೆ ಕೂಡ್ಲಗಿ ತಾಲ್ಲೂಕ ಮಾಕನಡುಕ ಗ್ರಾಮದ ಮಾರಮ್ಮ- ನಾಗರಾಜ ದಂಪತಿಗಳಿಗೆ ಹೆಣ್ಣು ಮಗು ಜನಿಸಿದೆ. ಇದೇ ಸಮಯದಲ್ಲಿ ಹೊಸಪೇಟೆ ಮರಿಯಮ್ಮನ ಹಳ್ಳಿ ದಂಪತಿ ನಾರಮ್ಮ- ವೆಂಕಟೇಶ್ ದಂಪತಿಗಳಿಗೆ ಗಂಡು ಮಗು ಜನಿಸಿದೆ. ಹೆರಿಗೆಯಾದ ನಂತರ ತಾಯಿ ಹೆಸರು ನಾರಮ್ಮ ಎಂದು ಕೂಗಿದ್ದನ್ನು ಮಾರಮ್ಮ ಎಂದು ಕೇಳಿಸಿಕೊಂಡು ನಾಗರಾಜ್ ದಂಪತಿ ಗಂಡು ಮಗುವನ್ನು ಸ್ವೀಕರಿಸಿದ್ದಾರೆ.
ತದನಂತರ ಎಚ್ಚೆತ್ತ ಆಸ್ಪತ್ರೆ ಸಿಬ್ಬಂದಿ ಗಂಡು ಮಗುವನ್ನು ವಾಪಸ್ಸು ಪಡೆದು ಹೆಣ್ಣು ಮಗುವನ್ನು ನೀಡಿದ್ದಾರೆ. ಇದರಿಂದ ನಾಗರಾಜ್ ದಂಪತಿಯ ತೃತೀಯ ಲಿಂಗಿಗಳು ಆಸ್ಪತ್ರೆ ಮುಂದೆ ಪ್ರತಿಭಟಿಸಿ ಆಸ್ಪತ್ರೆ ಸಿಬ್ಬಂದಿ ಮೇಲೆ ಹರಿಹಾಯ್ದಿದ್ದಾರೆ.
ನಂತರ ಜಿಲ್ಲಾ ಆಸ್ಪತ್ರೆ ಅಧೀಕ್ಷಕ ಸ್ಥಳಕ್ಕೆ ಆಗಮಿಸಿ ಹೆಸರು ಕರೆದ ವೇಳೆ ಪೋಷಕರು ಮಾಡಿಕೊಂಡ ಗೊಂದಲ ಸರಿಪಡಿಸಿ ಪ್ರಕರಣ ಸುಖಾಂತ್ಯಗೊಳಿಸಿದ್ದಾರೆ.