ಹುಬ್ಬಳ್ಳಿ-ಧಾರವಾಡ-ಬೆಟ್ಟಿಂಗ್: ನಾಲ್ಕು ಠಾಣೆ- 9ಜನರ ಬಂಧನ- 425760 ವಶ
1 min read
ಹುಬ್ಬಳ್ಳಿ-ಧಾರವಾಡ: ಅವಳಿನಗರ ನಾಲ್ಕು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಾಳಿ ಮಾಡಿರುವ ಪೊಲೀಸರು ಸಾರ್ವಜನಿಕ ಸ್ಥಳಗಳಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ 9ಜನರ ಬಂಧನ ಮಾಡಿ, 4ಲಕ್ಷ 25760 ರೂಪಾಯಿಗಳನ್ನ ವಶಕ್ಕೆ ಪಡೆಯಲಾಗಿದೆ.
ಕೇಶ್ವಾಪುರ ಠಾಣೆ- ಮೂವರ ಬಂಧನ- 134500 ವಶ
ಕ್ರಿಕೆಟ್ ಪಂದ್ಯಾವಳಿಯಲ್ಲಿ ರನ್ ಹಾಗೂ ವಿಕೆಟ್ ಮೇಲೆ ಹಣವನ್ನ ಕಟ್ಟಿ ಬೆಟ್ಟಿಂಗ್ ಆಡುತ್ತಿದ್ದ ಮೂವರನ್ನ ಬಂಧನ ಮಾಡಲಾಗಿದ್ದು, ಬಂಧಿತರನ್ನ ರಾಜಾರಾವ್, ರಾಜೇಂದ್ರ ಹಾಗೂ ಶಿವರಾಮಕೃಷ್ಣ ಎಂದು ಗುರುತಿಸಲಾಗಿದೆ. ಬಂಧಿಯರಿಂದ 134500 ನಗದು ಹಾಗೂ ಎರಡು ಮೊಬೈಲಗಳನ್ನ ವಶಕ್ಕೆ ಪಡೆಯಲಾಗಿದೆ.
ಅಶೋಕನಗರ ಠಾಣೆ- ಇಬ್ಬರ ಬಂಧನ- 136260 ವಶ
ಹುಬ್ಬಳ್ಳಿ ಅಶೋಕನಗರ ಪೊಲೀಸ ಠಾಣೆ ವ್ಯಾಪ್ತಿಯ ಹುಬ್ಬಳ್ಳಿ ಶಕ್ತಿ ಕಾಲನಿ ಜೆ ಕೆ ಸ್ಕೂಲ್ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಶಾರ್ಜಾ ದಲ್ಲಿ ನಡೆಯುತ್ತಿರುವ ಮುಂಬೈ ಇಂಡಿಯನ್ಸ ಹಾಗೂ ಸನ್ ರೈಸರ್ಸ್ ಹೈದ್ರಾಬಾದ್ ಎರಡು ತಂಡಗಳ ನಡುವೆ 20 ಓವರಗಳ 20/20 ಮ್ಯಾಚಿನ ಒಂದು ಸಾವಿರ ರೂಪಾಯಿಗೆ ಒಂದು ಸಾವಿರ ರೂಪಾಯಿ ಕೊಡುವುದಾಗಿ ಹೇಳಿ ಮೊಬೈಲ್ ಪೋನಗಳ ಮುಖಾಂತರ ಹಣವನ್ನು ಒಂದು ಹಾಳೆಯಲ್ಲಿ ಬರೆದುಕೊಂಡು ಅಕ್ರಮ ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ನಡೆಸಿ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದ ಆರೀಫ್ ರೆಹತುಮಲ್ಲಾ ಸಾತೇನಹಳ್ಳಿ ಹಾಗೂ ವಿಶಾಲ ರಾಜುಸಾ ಬಾಂಡಗೆ ಎಂಬುವವರನ್ನ ಬಂಧನ ಮಾಡಲಾಗಿದೆ.
ಬಂಧಿತರಿಂದ ಮೂರು ಮೊಬೈಲ್ ಹಾಗೂ 1ಲಕ್ಷ 36260 ರೂಪಾಯಿ ವಶಕ್ಕೆ ಪಡೆಯಲಾಗಿದೆ.
ಧಾರವಾಡ ಉಪನಗರ ಠಾಣೆ- ಇಬ್ಬರ ಬಂಧನ- 25000ವಶ
ಧಾರವಾಡ ಉಪನಗರ ಪೊಲೀಸ ಠಾಣೆ ವ್ಯಾಪ್ತಿಯ ಧಾರವಾಡ ಓಲ್ಡ್ ಡಿವೈಎಸ್ಪಿ ಸರ್ಕಲ್ ಹತ್ತಿರ ತಮ್ಮ ಲಾಭಕಲ್ಕಾಗಿ ದುಬೈನ ಶಾರ್ಜಾದಲ್ಲಿ ನಡೆಯುತ್ತಿರುವ ಸನ್ ರೈಜ್‌ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ಕ್ರಿಕೇಟ್ ತಂಡಗಳ ಐಪಿಎಲ್ ಪಂದ್ಯಗಳ ಮೇಲೆ ಕ್ರಿಕೇಟ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ರಿಯಾಜಖಾನ್ ಮೆಹಬೂಬಖಾನ್ ರೌಫ್‌ಖಾನ್ ಹಾಗೂ ಅಲ್ಲಾಭಕ್ಷ ಮಹ್ಮದಹುಸೇನ್ ನವಲೂರ ಎಂಬುವವರನ್ನ ಬಂಧನ ಮಾಡಲಾಗಿದೆ. ಬಂಧಿತರಿಂದ 25000 ರೂಪಾಯಿ ಹಾಗೂ ಒಂದು ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಗೋಕುಲ ಪೊಲೀಸ್ ಠಾಣೆ- ಇಬ್ಬರ ಬಂಧನ- 130000ವಶ
ಗೋಕುಲ ರೋಡ್ ಪೊಲೀಸ ಠಾಣೆ ವ್ಯಾಪ್ತಿಯ ರುದ್ರಾಗಂಗಾ ಲೇ ಔಟನಲ್ಲಿ ಕ್ರಿಕೆಟ್ ಬೆಟ್ಟಿಂಗನಲ್ಲಿ ತೊಡಗಿದ್ದ ಪರಶುರಾಮ ಜಗನ್ನಾಥಸಾ ಲದವಾ ಹಾಗೂ ವಿನಾಯಕ ಮಿಸ್ಕಿನ್ ಎಂಬುವವರನ್ನ ಬಂಧನ ಮಾಡಲಾಗಿದ್ದು, ಬಂಧಿತರಿಂದ 130000 ರೂಪಾಯಿ ಹಾಗೂ ಎರಡು ಮೊಬೈಲ್ ಮತ್ತು ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ.