Posts Slider

Karnataka Voice

Latest Kannada News

ಕರೆ ಮಾಡಿದ ಹತ್ತು ನಿಮಿಷದ ಒಳಗಾಗಿ ದೊರಕಲಿದೆ ಪೊಲೀಸ್ ನೆರವು: ಐಪಿಎಸ್ ಲಾಬೂರಾಮ್

1 min read
Spread the love

ಹುಬ್ಬಳ್ಳಿ: ತುರ್ತು ಸಂದರ್ಭದಲ್ಲಿ ಪೊಲೀಸ್, ಅಗ್ನಿಶಾಮಕ, ಅಂಬ್ಯುಲೆನ್ಸ್ ಗಾಗಿ ಕರೆ ಮಾಡಲು ತುರ್ತು ಸ್ಪಂದನ ವ್ಯವಸ್ಥೆ ಸಂಖ್ಯೆ112 ಕ್ಕೆ ಚಾಲನೆ ನೀಡಲಾಗಿದೆ. ಕರೆ ಮಾಡಿದ 15 ಸೆಕೆಂಡುಗಳಲ್ಲಿ ಕರೆ ಸ್ವೀಕರಿಸಿ, ಹತ್ತು ನಿಮಿಷದ ಒಳಗಾಗಿ ಅಗತ್ಯ ಪೊಲೀಸ್ ನೆರವು ಒದಗಿಸಲಾಗುವುದು. ಸಾರ್ವಜನಿಕರು‌ ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಲಾಬುರಾಮ್ ಹೇಳಿದರು.

ಹುಬ್ಬಳ್ಳಿ ಚನ್ನಮ್ಮ ವೃತ್ತದ ಬಳಿ ತುರ್ತು ಸ್ಪಂದನ ವ್ಯವಸ್ಥೆ ಸಂಖ್ಯೆ112 ಕ್ಕೆ ನಿಯೋಜಿಸಲಾಗಿರುವ ಹೊಯ್ಸಳ ಗಸ್ತು ವಾಹನಗಳಿಗೆ ಚಾಲನೆ ನೀಡಿ, ನಂತರ ಉಪನಗರ ಪೊಲೀಸ್ ಠಾಣೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಸರ್ಕಾರದ ನಿರ್ದೇಶನದಂತೆ ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ 15 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 15 ತುರ್ತು ಸ್ಪಂದನ ವ್ಯವಸ್ಥೆ ವಾಹನಗಳನ್ನು ನಿಯೋಜಿಸಲಾಗಿದೆ. ಈ ವಾಹನಗಳು‌ 24 ಗಂಟೆಯೂ ಕಾರ್ಯ ನಿರ್ವಹಿಸಲಿವೆ.‌ ಕರೆ ಬಂದ ತಕ್ಷಣ ಸ್ಥಳಕ್ಕೆ ಧಾವಿಸುವ ಪೊಲೀಸ್ ತಂಡವು ಅಗತ್ಯ ಸಹಾಯ ಒದಗಿಸುವುದು. ಸಾರ್ವಜನಿಕರು ಪೊಲೀಸ್ ದೂರುಗಳಿಗೆ ಸಂಬಂಧಿಸಿದಂತೆ ನೇರವಾಗಿ 112 ಗೆ ಕರೆ ಮಾಡಬಹುದು. ತುರ್ತು ಸ್ಪಂದನ ವ್ಯವಸ್ಥೆಗೆ ಸಂಬಂಧಪಟ್ಟಂತೆ ಅ್ಯಪ್ ಲಭ್ಯವಿದೆ. ಗೂಗಲ್ ಪ್ಲೇ ಸ್ಟೋರ್ ಮೂಲಕ 112 India mobile app ಸಹ ಡೌನ್ ಲೋಡ್ ಮಾಡಿಕೊಳ್ಳಬಹುದು.112hubdwd@gmail.com ಗೆ ಮೇಲ್ ಮಾಡಿ ಸಹ ದೂರು ಸಲ್ಲಿಸಬಹುದಾಗಿದೆ ಎಂದರು.

ಈ ಸಂದರ್ಭದಲ್ಲಿ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಆರ್. ಡಿ. ಬಸರಗಿ ಸೇರಿದಂತೆ  ಪೊಲೀಸ್ ಅಧಿಕಾರಿಗಳು ‌ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *