‘ಟಫ್ ಕಾಫ್’ ಐಪಿಎಸ್ ಲಾಬೂರಾಮ್ ‘ಕಂ ಬ್ಯಾಕ್’: ಬರೋದಿಲ್ಲವೆಂದವರಿಗೆ ಮುಂದಿದೆ…!
1 min read
ಹುಬ್ಬಳ್ಳಿ: ಅನಾರೋಗ್ಯದಿಂದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಲಾಬೂರಾಮ್ ಅವರು ಇಂದು ಮತ್ತೆ ಕಮೀಷನರ್ ಹುದ್ದೆಯಿಂದ ಕರ್ತವ್ಯ ಆರಂಭಿಸಿದ್ದು, ಪ್ರಭಾರಿಯಾಗಿದ್ದ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ ಅವರನ್ನ, ತಮ್ಮ ಮೊದಲಿನ ಹುದ್ದೆಗೆ ಮರಳಿದ್ದಾರೆ.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಐಪಿಎಸ್ ಲಾಬೂರಾಮ್ ಅವರು ಅನಾರೋಗ್ಯದಿಂದ ಬಳಲಿದ್ದರು. ಮೊದಲು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ನಂತರ ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ನಂತರ ಸುಧಾರಣೆ ಕಾಣದ ಹಿನ್ನೆಲೆಯಲ್ಲಿ ಅವರನ್ನ ಏರ್ ಲಿಫ್ಟ್ ಮೂಲಕ ಬೆಂಗಳೂರಿಗೆ ಸ್ಥಳಾಂತರ ಮಾಡಲಾಗಿತ್ತು.
ಹಲವು ದಿನಗಳ ಚಿಕಿತ್ಸೆ ನಂತರ ಸಂಪೂರ್ಣವಾಗಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದು, ಮತ್ತೇ ರೆಸ್ಟ್ ಪಡೆದು ಇಂದು ನಗರಕ್ಕೆ ಆಗಮಿಸಿ, ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಐಪಿಎಸ್ ಲಾಬೂರಾಮ್ ಅವರು ಬೆಂಗಳೂರಿಗೆ ತೆರಳಿದಾಗ, ಅವರು ಮರಳಿ ಬರೋದಿಲ್ಲವೆಂದು ಕೆಲವರು ವದಂತಿಯನ್ನ ಹಬ್ಬಿಸಿದ್ದರು.
ಇದೀಗ ದಕ್ಷ ಅಧಿಕಾರಿ ಆರೋಗ್ಯವಾಗಿ ಮರಳಿದ್ದು, ಕಮೀಷನರೇಟ್ ವ್ಯಾಪ್ತಿಯ ಸಿಬ್ಬಂದಿಗಳಲ್ಲೂ ಸಂತಸ ಮೂಡಿಸಿದೆ. ಇಂದು ಲವಲವಿಕೆಯಿಂದಲೇ ಲಾಬುರಾಮ್ ಅವರು ಕರ್ತವ್ಯ ನಿರ್ವಹಿಸಿದ್ದಾರೆಂದು ಗೊತ್ತಾಗಿದೆ.