ಹುಬ್ಬಳ್ಳಿ ಹೊಸ ಕಮೀಷನರ್ ಲಾಬು ರಾಮ್ ಅವರ ಬಗ್ಗೆ ನಿಮಗೆಷ್ಟು ಗೊತ್ತು..!
1 min read
ಹುಬ್ಬಳ್ಳಿ: ಸರಕಾರದ ವರ್ಗಾವಣೆ ಆದೇಶ ಹೊರಗೆ ಬಂದ ನಂತರ ಇನ್ನೇನು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ ಹುದ್ದೆಗೆ ಬರಲಿರುವ ಐಪಿಎಸ್ ಲಾಬು ರಾಮ್ ಅವರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿಯಿದ್ದರೇ, ಈ ವರದಿಯನ್ನ ಪೂರ್ಣವಾಗಿ ಓದಿ.
ರಾಜಸ್ಥಾನ ಬಾಡಮೇರ್ ಜಿಲ್ಲೆಯ ಜೋಹಟನ್ ತಾಲೂಕಿನ ತಾರಾತರ ಗ್ರಾಮದ ಲಾಬು ರಾಮ್ ಅವರು ಅಕ್ಟೋಬರ್ 10, 1977ರಂದು ಜನಿಸಿದ್ದಾರೆ. 2004 ಐಪಿಎಸ್ ಕರ್ನಾಟಕ ಕೇಡರ್ ನಲ್ಲಿ ಆಯ್ಕೆಯಾಗಿದ್ದವರು. ನಂತರ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತ ಬಂದಿದ್ದಾರೆ.
ರಾಜ್ಯದ ದಕ್ಷಿಣ ಕನ್ನಡ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಎರಡು ಮಕ್ಕಳನ್ನೂ ಹೊಂದಿರುವ ಐಪಿಎಸ್ ಲಾಬು ರಾಮ್ ಅವರ ಪತ್ನಿ ಗಾಯತ್ರಿದೇವಿ, 2014ರಲ್ಲಿ ಕಾರ್ಕಳದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ತೀರಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುವಾಗ ಗೂಂಡಾಗಿರಿಯನ್ನ ಹತ್ತಿಕ್ಕುವ ಜೊತೆಗೆ ಸರಗಳ್ಳತನ, ಕಳ್ಳತನ ಪ್ರಕರಣಗಳನ್ನ ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇವರ ಕಾರ್ಯವೈಖರಿಯಿಂದ 2016-17ರಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಇಂತಹ ದಕ್ಷ ಅಧಿಕಾರಿ ಅವಳಿನಗರದ ಪೊಲೀಸ್ ಕಮೀಷನರ್ ಆಗಿ ಬರುತ್ತಿರುವುದು, ಅವಳಿನಗರದ ಜನರಲ್ಲಿ ಸಂತಸ ಮೂಡಿಸಿದೆ. ಜನಸ್ನೇಹಿ ಪೊಲೀಸರಾದರೇ ಇನ್ನಷ್ಟು ಒಳ್ಳೆಯದಾಗಬಹುದೆಂಬ ಸಂಕಲ್ಪವನ್ನ ಲಾಬು ರಾಮ್ ಅವರು ಹೊಂದಿದ್ದಾರೆ.