ಸಿಎಂ ಯಡಿಯೂರಪ್ಪರನ್ನೇ ಬದಲಿಸಿದ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ
1 min read
ಬೆಂಗಳೂರು: ಕರ್ನಾಟಕ ಸರಕಾರ ಮುಖ್ಯಮಂತ್ರಿಯವರನ್ನೇ ಬದಲಾವಣೆ ಮಾಡಿದ ಕೀರ್ತಿಯನ್ನ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರು ಹೊಂದಿದ್ದು, ಅವರೊಬ್ಬ ಶಿಕ್ಷಕರು ಎನ್ನುವುದನ್ನ ಮರೆತು ಯಾರನ್ನ ರಾಜ್ಯ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ ನೀವೇ ಕೇಳಿ ನೋಡಿ..
ಸರಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಈ ರಾಜ್ಯದ ಮುಖ್ಯಮಂತ್ರಿಯಂತೆ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರು ಶಂಭುಲಿಂಗನಗೌಡರ ಭಾಷಣದಲ್ಲಿ ಪ್ರಸ್ತಾಪ ಮಾಡಿದ್ದಾರೆ.
ಓರ್ವ ವ್ಯಕ್ತಿಯನ್ನ ಹೊಗಳುವ ನೆಪದಲ್ಲಿ ತಾವೂ ಏನೂ ಮಾತನಾಡುತ್ತಿದ್ದೇವೆ ಎಂಬ ಪರಿಜ್ಞಾನವೂ ಇಲ್ಲದ ಹಾಗೇ ಮಾತನಾಡಿರುವುದು ಖೇದಕರ ಸಂಗತಿಯಾಗಿದೆ. ತಾವೋಬ್ಬ ಶಿಕ್ಷಕರ ಪ್ರತಿನಿಧಿ ಎಂಬುದನ್ನ ಮರೆತಿರುವ ರಾಜ್ಯಾಧ್ಯಕ್ಷ ಶಂಭುಲಿಂಗ ಗೌಡ ಅವರು, ಇಷ್ಟೊಂದು ಜ್ಞಾನವಿಲ್ಲದವರಾದರಾ ಎಂಬ ಪ್ರಶ್ನೆಯನ್ನ ಜನರು ಕೇಳುವಂತಾಗಿದೆ.
ಅಂದ ಹಾಗೇ ಶಂಭುಲಿಂಗಗೌಡರೇ ಕರ್ನಾಟಕಕ್ಕೆ ಸಧ್ಯ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾರೆ. ಮೂವರು ಡಿಸಿಎಂಗಳಿದ್ದಾರೆ. ಅಷ್ಟೇ.. ನಿಮಗೆ ತಿಳಿದಿರಲಿ.. ನೀವೂ ಶಿಕ್ಷಕರು ನಿಮಗೆ ಗೊತ್ತಿರಲಿ.. ಮಕ್ಕಳು ನಿಮ್ಮನ್ನ ನೋಡಿ ಕಲಿಯುತ್ತಾರೆ..