Posts Slider

Karnataka Voice

Latest Kannada News

ಸಂವಿಧಾನವೇ ಮುಖ್ಯ: ಸಿವಿಲ್ ಹಿರಿಯ ನ್ಯಾಯಾಧೀಶ ಆರ್.ಎಸ್.ಚಿನ್ನಣ್ಣನವರ

1 min read
Spread the love

ಧಾರವಾಡ: ವಿದ್ಯಾನಿಕೇತನ ಧಾರವಾಡ ಹಾಗೂ ಸಮರಸ ವೇದಿಕೆ  ಸಂಯುಕ್ತ ಆಶ್ರಯದಲ್ಲಿ ಸಹೋದಯ‌ ಸಭಾಭವನ ನಿರ್ಮಲನಗರದಲ್ಲಿ ಸಂವಿಧಾನ ದಿನ ಮತ್ತು ಕಾನೂನು-2020  ದಿನಾಚರಣೆಯನ್ನು ಆಚರಿಸಲಾಯಿತು.

ಸಿವಿಲ್ ಹಿರಿಯ ನ್ಯಾಯಾಧೀಶರು ಹಾಗೂ ಜಿಲ್ಲಾ ಉಚಿತ ಕಾನೂನು ನೆರವುಗಳ ಪ್ರಾಧಿಕಾರ ಧಾರವಾಡದ ಕಾರ್ಯದರ್ಶಿ ಆರ್.ಎಸ್. ಚಿನ್ನಣ್ಣನವರ ಉಧ್ಘಾಟಕರಾಗಿ ಆಗಮಿಸಿ, ಸಂವಿಧಾನದ ಮಹತ್ವ ತಿಳಿಸಿದರು. ದೇಶದಲ್ಲಿ ಹಲವಾರು ಧರ್ಮಗ್ರಂಥಗಳಿವೆ. ಆದರೆ, ಧರ್ಮಗ್ರಂಥಗಳಲ್ಲಿ ಭಾರತಕ್ಕೆ ಸಂವಿಧಾನ ಬಹಳ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಭಾರತ ದೇಶ ಸರ್ವ ಧರ್ಮಿಯರ ದೇಶ. ಈ ದೇಶದ ಪ್ರತಿಯೊಬ್ಬ ಪ್ರಜೆ ಯಾರೇ ಆಗಿದ್ದರು ಸಂವಿಧಾನ ಉಲ್ಲಂಘನೆ ಮಾಡಿದರೆ ಶಿಕ್ಷೆಗೆ ಒಳ ಪಡುತ್ತಾನೆ‌ ಎಂದು ತಿಳಿಸಿ, ಕಾನೂನು ಪ್ರಾಧಿಕಾರದ ಸವಲತ್ತುಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿ ಪ್ರಾಧಿಕಾರದ ಉಪಯೋಗ ಪಡೆಯಲು ಕರೆ ನೀಡಿದರು.

ಅತಿಥಿ ಉಪನ್ಯಾಸಕರಾದ ಕಾನೂನು ವಿಭಾಗ ಕರ್ನಾಟಕ ವಿಶ್ವವಿದ್ಯಾಲಯದ ಮುಖ್ಯಸ್ಥೆ ಡಾ ಎಸ್.ಆರ್. ಮಂಜುಳಾ ಇವರು, ಸಂವಿಧಾನ ಆರ್ಟಿಕಲ 21 ರಿಂದ 28ರವರೆಗೆ ವಿವರಿಸಿದರು.  ಭಾರತ ದೇಶ ಲಿಂಗ ಸಮಾನತೆ, ರಾಜಕೀಯ ಸಮಾನತೆ, ಜಾತಿ ಸಮಾನತೆ, ಶೈಕ್ಷಣಿಕ ಸಮಾನತೆ ಮತ್ತು ಧರ್ಮ ಸಮಾನತೆಯ ಬಗ್ಗೆ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುತ್ತದೆ ಎಂದು ಹೇಳಿದರು.  ಮನ ಮುಟ್ಟುವಂತೆ ಸಂವಿಧಾನದ ರಚನೆಯ ಹಿಂದಿರುವ ಪ್ರತಿಯೊಂದು ವಿಚಾರಗಳನ್ನು ಮಾರ್ಮಿಕವಾಗಿ ತಿಳಿಸಿಕೊಟ್ಟರು.

ಅಧ್ಯಕ್ಷೀಯ ಮಾತುಗಳನ್ನು ವಿದ್ಯಾನಿಕೇತನ ಮುಖ್ಯಸ್ಥರಾದ ಸ್ವಾಮಿ ಅಂಥೋನಿ ಇವರು ಸಮರ್ಪಿಸಿದರು. ರಾಷ್ಟೀಯತೆ ಮತ್ತು ಜಾತ್ಯಾತೀತ ರಾಷ್ಟ್ರದ ಕನಸು ನಮ್ಮ ಸಂವಿಧಾನ ಹೇಳಿಕೊಡುತ್ತದೆ. ದೇಶದಲ್ಲಿ ಪ್ರತಿಯೊಬ್ಬ ಪ್ರಜೆಗೆ ತನ್ನ ಜೀವಿಸುವ ಹಕ್ಕಿದೆ  ಎಂಬುದಾಗಿ ತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನು‌ ಯುವ ಘಟಕ ವಿದ್ಯಾನಿಕೇತನ ಸಂಚಾಲಕ ಸ್ವಾಮಿ ಎಡ್ವರ್ಡ ನಿರ್ವಹಿಸಿದರು.

ವ್ಯಕ್ತಿ ಪರಿಚಯವನ್ನ ಸಾಧನಾ ಸಂಸ್ಥೆಯ ಡಾ ಇಸಬೆಲಾ ಝೇವಿಯರ, ಸಿ.ಎಸ್.ಐ ಕಾಲೇಜ ಧಾರವಾಡದ ನಿವೃತ ಪ್ರಾಶುಂಪಾಲ ಡಾ ಮಳೇಕರ, ಸಿಸ್ಟರ ಶಾಂತಿಸದನ ಧಾರವಾಡ ಇವರು ನಡೆಸಿಕೊಟ್ಟರು. ಕಾರ್ಯಕ್ರಮದ  ಸಂಯೋಜನೆ ಮುಖ್ಯಸ್ಥ ಮೆಲ್ವಿನ್ನ ಜೋಸೇಫ, ಕಾರ್ಯಕ್ರಮ ನಿರ್ವಹಣೆ ಸುಮನ್, ಧನ್ಯವಾದ ಸಮರ್ಪಣೆ ನವೀನ ನಡೆಸಿಕೊಟ್ಟರು.

ಸ್ಟೀವ ಅಬ್ರಾಹಂ, ಸಂಗೀತಾ ಅಬ್ರಾಹಂ ಮುಖ್ಯಸ್ಥರು ಸಿ.ಎಸ.ಐ ಚರ್ಚ ವಿಲಿಯಂ, ಮತ್ತು   ವೆರೋನಿಕಾ, ವಕೀಲರಾದ ಸುನಂದಾ ಮತ್ತು ಮಂಜುನಾಥ ಪ್ರಜೆಂಟೇಶನ ವಿದ್ಯಾಸಂಸ್ಥೆಯ ವಿಧ್ಯಾರ್ಥಿನಿಯರು ಮತ್ತು ಸಿಬ್ಬಂದಿ ಬಳಗ, ಲೂರ್ಧ ನರ್ಸಿಂಗ ಶಾಲೆಯ ಪ್ರಾಂಶುಪಾಲರು ವಿಧ್ಯಾರ್ಥಿಗಳು, ಕೃಪಾಲಯ, ಮರಿಯಾ ನಿವಾಸದ  ಮುಖ್ಯಸ್ಥರು  ಸದಸ್ಯರು ಭಾಗವಹಿಸಿದ್ದರು.


Spread the love

Leave a Reply

Your email address will not be published. Required fields are marked *