ಪ್ರತಿಷ್ಠಿತ ಜವಳಿ ವ್ಯಾಪಾರಿ ರಾಯಚಂದಜಿ ಛೋಪ್ರಾ ನಿಧನ
1 min read
ಧಾರವಾಡ: ಇಲ್ಲಿಯ ಭಾರತಿ ನಗರ ನಿವಾಸಿ, ಪ್ರತಿಷ್ಠಿತ ಜವಳಿ ವ್ಯಾಪಾರಸ್ಥರಾದ ಹಾಗೂ ಮಹಾವೀರ ಸ್ಟೋರ್ಸ್ ಮಾಲೀಕರಾದ ರಾಯಚಂದಜಿ ಗುಲಾಬಚಂದಜಿ ಛೋಪ್ರಾ (71) ಗುರುವಾರ ಸಂಜೆ ರಾಜಸ್ಥಾನದಲ್ಲಿ ನಿಧನರಾದರು.
ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧುಗಳಿದ್ದಾರೆ.
ಮೃತರ ಅಂತ್ಯಕ್ರಿಯೆ ಶುಕ್ರವಾರ (ನ.27)ರಂದು ರಾಜಸ್ಥಾನದಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಹುಬ್ಬಳ್ಳಿ-ಧಾರವಾಡದಲ್ಲಿಯೂ ಜವಳಿ ವ್ಯಾಪಾರದಲ್ಲಿ ತಮ್ಮದೇ ಆದ ಛಾಪನ್ನ ಮೂಡಿಸಿದ್ದ ಇವರ ಅಗಲಿಕೆಗೆ ನಗರದ ಜವಳಿ ವ್ಯಾಪಾರಿಗಳು ಸಂತಾಪ ಸೂಚಿಸಿದ್ದಾರೆ.