ಗಂಡ ಆಸ್ಪತ್ರೆಯಲ್ಲಿ- ಎದುರಿಗೆ ನಿಂತು ಕಣ್ಣೀರಾಗುತ್ತಿದ್ದಾಳೆ ಮಡದಿ- ಮನಕರಗುವ ಘಟನೆ
1 min read
ಹುಬ್ಬಳ್ಳಿ: ಬೈಕಿನಿಂದ ಬಿದ್ದು ತೀವ್ರವಾಗಿ ಗಾಯಗೊಂಡು ಹುಬ್ಬಳ್ಳಿಯ ಕಿಮ್ಸಗೆ ದಾಖಲಾಗಿರುವ ಗಂಡನ ಚೇತರಿಕೆಗಾಗಿ ಮಡದಿ ಕಣ್ಣೀರು ಹಾಕುತ್ತಿರುವ ಘಟನೆ ನಡೆದಿದೆ.
ಬೈಕಿನಲ್ಲಿ ಹೋಗುತ್ತಿದ್ದ ಫಕ್ಕೀರಪ್ಪ ಚೆನ್ನಳ್ಳಿಗೆ ತೀವ್ರವಾಗಿ ಗಾಯಗಳಾಗಿದ್ದು, ವಿದ್ಯಾನಗರ ಠಾಣೆ ಪೊಲೀಸರು ಮಾಹಿತಿಯನ್ನ ಕಲೆ ಹಾಕಿದ್ದಾರೆ. ಆದರೆ, ರಾತ್ರಿಯಿಂದಲೇ ಚಿಕಿತ್ಸೆ ದೊರೆಯುತ್ತಿದ್ದು, ಇನ್ನೂ ಚೇತರಿಕೆ ಕಾಣದೇ ಇರುವುದರಿಂದ ಮಡದಿ ಕಣ್ಣೀರಿಡುತ್ತಿದ್ದಾಳೆ.
ಬೈಕ್ ಅಪಘಾತದಲ್ಲಿ ಕಾಲು ಹಾಗೂ ಎದೆಗೆ ತೀವ್ರವಾದ ಗಾಯಗಳು ಆಗಿದ್ದರಿಂದ ಕೆಲವು ಗಂಟೆಗಳು ಚಿಕಿತ್ಸೆಗೆ ಸ್ಪಂಧಿಸಿದ ನಂತರ ಮತ್ತೆ ಚಿಕಿತ್ಸೆ ಮುಂದುವರೆಯುತ್ತದೆ. ಆದರೆ, ಮಡದಿ ಸುಶೀಲಾಗೆ ಗಂಡನ ಸ್ಥಿತಿ ನೋಡಿ ಕಣ್ಣೀರು ತಡೆಯದಾಗಿದೆ.
ಬೈಕ್ ಅಪಘಾತ ನಡೆದಿರುವ ಬಗ್ಗೆ ಪೊಲೀಸರು ಮಾಹಿತಿಯನ್ನ ಕಲೆ ಹಾಕಿದ್ದು, ಪ್ರಕರಣವನ್ನ ದಾಖಲು ಮಾಡಿಕೊಂಡಿದ್ದಾರೆ.