ಬ್ಯಾಹಟ್ಟಿ ಬಳಿ ಮರಳು ತುಂಬಿದ ಟಿಪ್ಪರ್ ಪಲ್ಟಿ

ಹುಬ್ಬಳ್ಳಿ: ತಾಲೂಕಿನ ಬ್ಯಾಹಟ್ಟಿ ಗ್ರಾಮದ ಮಲಪ್ರಭಾ ಕೆನಾಲ ಬಳಿ ಮರಳು ತುಂಬಿದ ಟಿಪ್ಪರವೊಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.
ನವಲಗುಂದ ಮೂಲದ ಬಸವರಾಜ ನರಗುಂದ ಎನ್ನುವವರಿಗೆ ಸೇರಿದ ಮರಳು ತುಂಬಿದ ಟಿಪ್ಪರ, ಧಾರವಾಡದತ್ತ ಹೊರಟಿತ್ತು. ಮಲಪ್ರಭಾ ನೀರಿನ ಕೆನಾಲ ಸಮೀಪ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ತಕ್ಷಣವೇ ಚಾಲಕ ಜಿಗಿದು ಪ್ರಾಣವನ್ನ ಉಳಿಸಿಕೊಂಡಿದ್ದಾನೆ.
ಟಿಪ್ಪರ್ ಮರಳು ಸಮೇತ ಮುಳ್ಳಿನ ಕಂಟಿಯೊಳಗೆ ಮುಗುಚಿ ಬಿದ್ದ ಪರಿಣಾಮ ಮರಳೆಲ್ಲ, ತಗ್ಗಿನಲ್ಲಿ ಬಿದ್ದಿದ್ದು, ಟಿಪ್ಪರ್ ಕೂಡಾ ಸಂಪೂರ್ಣವಾಗಿ ಜಖಂಗೊಂಡಿದೆ.
ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸುತ್ತಿದ್ದು, ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಳ್ಳಲಿದ್ದಾರೆ.