ನಮ್ಮೂರ ಜಾತ್ರೆಗೆ ಬನ್ನಿ: ಸಂತೋಷ ಜೀವನಗೌಡ್ರ ಮನವಿ
1 min read
ಹುಬ್ಬಳ್ಳಿ: ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ಡಿಸೆಂಬರ್ 30ರಂದು ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಸಕಲ ವಾಧ್ಯಗಳೊಂದಿಗೆ ನಡೆಯಲಿದ್ದು, ತಾವೇಲ್ಲರೂ ಆಗಮಿಸಿ ದೇವರ ಆಶೀರ್ವಾದ ಪಡೆಯಬೇಕೆಂದು ಭಾರತೀಯ ಜನತಾ ಪಕ್ಷದ ಯುವ ಮುಖಂಡ ಹಾಗೂ ಬ್ಯಾಹಟ್ಟಿ ಗ್ರಾಮದ ಪ್ರಮುಖ ಸಂತೋಷ ಜೀವನಗೌಡ್ರ ಮನವಿ ಮಾಡಿಕೊಂಡಿದ್ದಾರೆ.
ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಿಗ್ಗೆ ರುದ್ರಾಭಿಷೇಕ ಮತ್ತು ಬೆಳಿಗ್ಗೆ ಹತ್ತು ಗಂಟೆಗೆ ಗುಗ್ಗಳ ಕಾರ್ಯಕ್ರಮ ನಡೆಯಲಿದೆ. ಇದಾದ ನಂತರ ಸಂಜೆ 5.30ಕ್ಕೆ ಭಕ್ತರ ಸಮ್ಮುಖದಲ್ಲಿ ಶ್ರೀ ವೀರಭದ್ರೇಶ್ವರ ರಥೋತ್ಸವ ನೆರೆವೇರಲಿದೆ ಎಂದು ಹೇಳಿದ್ದಾರೆ.
ಡಿಸೆಂಬರ್ 31 ರಂದು ಕಡುಬಿನ ಕಾಳಗ ನಡೆಯಲಿದ್ದು, ಅದೇ ದಿನ ರಾತ್ರಿ 10.30ಕ್ಕೆ ‘ಅತ್ತಿಗೆಗೆ ಬಂದ ಆಪತ್ತು’ ಸಾಮಾಜಿಕ ನಾಟಕ ಪ್ರದರ್ಶನವನ್ನ ಹಮ್ಮಿಕೊಳ್ಳಲಾಗಿದೆ ಎಂದು ಸಂತೋಷ ಜೀವನಗೌಡ್ರ ಮಾಹಿತಿ ನೀಡಿದ್ದಾರೆ.
ಕೊರೋನಾ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಎಲ್ಲ ಮುಂಜಾಗ್ರತೆಯನ್ನ ತೆಗೆದುಕೊಂಡು ಭಕ್ತರಿಗೆ ಅನುಕೂಲ ಮಾಡಿಕೊಡಲಾಗಿದ್ದು, ಭಕ್ತ ಸಮೂಹ ನಿರಾಳವಾಗಿ ದರ್ಶನ ಪಡೆಯಬಹುದಾಗಿದೆ ಎಂದು ಹೇಳಿದ್ದಾರೆ.