Posts Slider

Karnataka Voice

Latest Kannada News

ಜಿಲ್ಲಾಧಿಕಾರಿ ಸಮ್ಮುಖದಲ್ಲೇ ಬಸ್ ಆರಂಭ: ಪ್ರಯಾಣಿಕರಿಗೆ ಮಾಸ್ಕ್ ಹಂಚಿದ ನಿತೇಶ ಪಾಟೀಲ

1 min read
Spread the love

ಹುಬ್ಬಳ್ಳಿ: ಕೆಎಸ್ಸಾರ್ಟಿಸಿ ನೌಕರರ ಪ್ರತಿಭಟನೆ ನಡೆಯುತ್ತಿರುವ ಬೆನ್ನಲ್ಲೇ ಸ್ವತಃ ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಪ್ರಯಾಣಿಕರನ್ನ ಕರೆ ಕರೆದು ಬಸ್ ನಲ್ಲಿ ಕೂಡಿಸಿದ ಘಟನೆ ನಡೆಯಿತು.

ಹಳೇ ಬಸ್ ನಿಲ್ದಾಣದಲ್ಲಿ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಬಸ್  ಸಂಚಾರಕ್ಕೆ ಅನುವು ಮಾಡಿಕೊಟ್ಟು ಹುಬ್ಬಳ್ಳಿ-ಧಾರವಾಡ ಬಸ್ ಸಂಚಾರ ಆರಂಭಗೊಳಿಸಿದರು. ಈ ಸಮಯದಲ್ಲಿ ಮಾಸ್ಕ್ ಹಾಕಿಕೊಳ್ಳದ ಪ್ರಯಾಣಿಕರಿಗೆ ಸ್ವತಃ ಜಿಲ್ಲಾಧಿಕಾರಿಗಳು ಮಾಸ್ಕ್ ವಿತರಣೆ ಮಾಡಿದ್ರು.

ಕಳೆದ ಮೂರ್ನಾಲ್ಕು ದಿನದಿಂದ ಪ್ರಯಾಣಿಕರು ಅನುಭವಿಸುತ್ತಿರುವ ತೊಂದರೆಯನ್ನ ಕೆಲವರು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. ಇದನ್ನೇಲ್ಲ ಸಮಾಧಾನದಿಂದ ಕೇಳಿದ ಜಿಲ್ಲಾಧಿಕಾರಿಗಳು, ಬಸ್ ಆರಂಭ ಮಾಡುತ್ತಿದ್ದೇವೆ. ನಿಮ್ಮ ನಿಮ್ಮ ಪ್ರದೇಶಗಳಿಗೆ ತಲುಪಿ ಎಂದು ಹೇಳಿದರು.

ಜಿಲ್ಲಾಧಿಕಾರಿ ನಿತೇಶ ಪಾಟೀಲ, ನವನಗರ.. ನವನಗರ ಎಂದು ಹೇಳುತ್ತಲೇ ಪ್ರಯಾಣಿಕರಿಗೆ ಬಸ್ ಆರಂಭದ ಬಗ್ಗೆ ಮುನ್ಸೂಚನೆ ನೀಡಿದರು. ತಹಶೀಲ್ದಾರ ಶಶಿಧರ ಮಾಡ್ಯಾಳ ಸೇರಿದಂತೆ ಹಲವು ಅಧಿಕಾರಿಗಳು, ಚಾಲಕ, ನಿರ್ವಾಹಕರರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.


Spread the love

More Stories

Leave a Reply

Your email address will not be published. Required fields are marked *

You may have missed