ಬಿಜೆಪಿ ನಾಲ್ಕು ಸದಸ್ಯರು ನಂಜೊತೆ ಸೇರಲು ಬಂದಿದ್ರು: ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ
1 min read
ಹುಬ್ಬಳ್ಳಿ: ನವಲಗುಂದ ಪುರಸಭೆ ಚುನಾವಣೆಯಲ್ಲಿ ಅಧಿಕಾರ ಹಿಡಿಯುವ ಉದ್ದೇಶದಿಂದ ನಾಲ್ಕು ಬಿಜೆಪಿ ಸದಸ್ಯರು ನಂಜೊತೆ ಸೇರಲು ಬಂದಿದ್ದರು. ಆದರೆ, ನಾನೇ ಬೇಡ ಎಂದು ಸುಮ್ಮನಾದೆ ಎಂದು ನವಲಗುಂದ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಹೇಳಿದರು.
ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆಗೆ ಅಧಿಕಾರ ಹಂಚಿಕೊಳ್ಳಬೇಕೆಂದುಕೊಂಡಿದ್ದ ಜೆಡಿಎಸ್ ಗೆ ಕಾಂಗ್ರೆಸ್ ಕೈ ಕೊಟ್ಟ ನಂತರ ಮಾಧ್ಯಮದವರ ಮುಂದೆ ಮಾತನಾಡಿದ ಎನ್.ಎಚ್.ಕೋನರೆಡ್ಡಿ, ಭಾರತೀಯ ಜನತಾ ಪಕ್ಷದ ನಾಲ್ವರು ಸದಸ್ಯರು ಬಂದು ಜೆಡಿಎಸ್ ಗೆ ಬೆಂಬಲ ನೀಡುವುದಾಗಿ ಹೇಳಿದ್ದರು. ನಾನೇ ಬೇಡಾ ಎಂದು ಹೇಳಿ ಕಳಿಸಿದೆ ಎಂಬ ಮಾಹಿತಿ ನೀಡಿದ್ರು.
ಕಾಂಗ್ರೆಸ ಪಕ್ಷಕ್ಕೆ ಬಿಜೆಪಿ ಸಫೋರ್ಟ್ ಮಾಡಿದೆ. ತಾಲೂಕು ಪಂಚಾಯತಿ, ಎಪಿಎಂಸಿಯಲ್ಲೂ ಕಾಂಗ್ರೆಸ್ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿವೆ. ನನ್ನ ಪಾಪ್ಯುಲಾರಿಟಿಯನ್ನ ಕಡಿಮೆ ಮಾಡಿಸುವ ಉದ್ದೇಶದಿಂದ ಹೀಗೆ ಮಾಡಲಾಗುತ್ತಿದೆ ಎಂದು ಹೇಳಿದ್ರು.