ಬಿಜೆಪಿ ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ಸಂತೋಷ ಚವ್ಹಾಣ- ರೈತ ಮೋರ್ಚಾ ಈಶ್ವರಗೌಡ ಪಾಟೀಲ ಜುಗಲ್ ಬಂದಿ..
1 min read
ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಮತ ಕ್ಷೇತ್ರದ ವಾರ್ಡ 29ರ ಗೋಪನಕೊಪ್ಪದಲ್ಲಿನ ಸದ್ಗುರು ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದ ಹಿನ್ನೆಲೆಯಲ್ಲಿ ಗೋವುಗಳ ಪೂಜೆ ಮಾಡುವುದರೊಂದಿಗೆ ಸಂಭ್ರಮಾಚರಣೆ ಆಚರಿಸಲಾಯಿತು.
ನಾವೂ ಗೌರವಿಸುವ ಗೋವನ್ನ ಕಾಪಾಡುವ ಕಾಯ್ದೆಯನ್ನ ಜಾರಿಗೆ ತರುವ ಮೂಲಕ ಭಾರತೀಯ ಜನತಾ ಪಕ್ಷ ಹೊಸ ಇತಿಹಾಸವನ್ನ ಸೃಷ್ಟಿ ಮಾಡಿದೆ. ಗೋವುಗಳನ್ನ ನಾವೇಲ್ಲರೂ ಮಾತೆ ಎಂದು ಪರಿಗಣಿಸುತ್ತ ಬಂದಿದ್ದು, ಅದಕ್ಕೊಂದು ಪೂಜಿನೀಯ ಭಾವವಿದೆ ಎಂದು ಸೆಂಟ್ರಲ್ ಅಧ್ಯಕ್ಷ ಸಂತೋಷ ಚವ್ಹಾಣ ಹೇಳಿದರು.
ರೈತ ಮೋರ್ಚಾದ ಈಶ್ವರಗೌಡ ಪಾಟೀಲ, ರಾಮಚಂದ್ರ ಹದಗಲ್ಲ, ಬೀರಪ್ಪ ಖಂಡೇಕಾರ, ಮೇನಕಾ ಹುರಳಿ, ಮಲ್ಲಿಕಾರ್ಜುನ ಗುಂಡೂರ, ಮಹೇಂದ್ರ ಕೌತಾಳ, ರಾಜು ಕಾಳೆ, ಅಶೋಕ ವಾಲ್ಮೀಕಿ, ರೂಪಾ ಶೆಟ್ಟಿ, ಅಕ್ಕಮ್ಮ ಹೆಗಡೆ, ಉಮಾ ಮುಕುಂದ, ಜಯಶ್ರೀ ನಿಂಬರಗಿ, ಭಾರತಿ ಟಪಾಲ, ವಸಂತ ನಾಡಜೋಶಿ, ಕೃಷ್ಣ ಗಂಡಗಾಳೇಕರ, ಗೋಪಾಲ ಬದ್ದಿ, ವಿರೂಪಾಕ್ಷ ರಾಯನಗೌಡರು, ಅವಿನಾಶ ಹರಿವಾಣ, ಚಂದ್ರು ನೂಲ್ವಿ, ಸುಭಾಷ ಅಂಕಲಕೋಟಿ, ರಾಧಾ ದೇಸಾಯಿ, ಪ್ರಭಾ ಹೀರೇಮಠ, ಸೋನಿ ಗುಡ್ಡದ, ಬಸವರಾಜ ಬೆಳಗಲಿ, ದೇವಿಕಾ ಚಲವಾದಿ ಸರಿದಂತೆ ಹಲವರು ಭಾಗವಹಿಸಿದ್ದರು.