ಕೇಶ್ವಾಪುರ ಠಾಣೆ ಪೊಲೀಸರ ಕಾರ್ಯಾಚರಣೆ: ಬೆಟ್ಟಿಂಗ್ ಕುಳಗಳ ಬಂಧನ
1 min read
ಹುಬ್ಬಳ್ಳಿ: ಮೊಬೈಲ್ ನಲ್ಲಿಯೇ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ ಮೂವರನ್ನ ಬಂಧನ ಮಾಡುವಲ್ಲಿ ಕೇಶ್ವಾಪುರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ಸಾರ್ವಜನಿಕ ಸ್ಥಳದಲ್ಲಿಯೇ ದಂಧೆ ನಡೆಸುತ್ತಿರುವುದು ಬಯಲಿಗೆ ಬಂದಿದೆ.
ಹುಬ್ಬಳ್ಳಿ ಜನತಾ ಕಾಲನಿಯ ಸಾರ್ವಜನಿಕ ಸ್ಥಳದಲ್ಲಿ ರಾಯಲ್ ಚಾಲೆಂಜರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ ನಡುವೆ ಪಂದ್ಯ ನಡೆಯುತ್ತಿದ್ದಾಗ, ಬೆಟ್ಟಿಂಗ್ ನಲ್ಲಿ ತೊಡಗಿದ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದ್ದರು.
ಬಂಧಿತರನ್ನ ಶಿವರಾಮಕೃಷ್ಣ, ರಾಜೇಂದ್ರ ಹಾಗೂ ರಾಜರಾವ್ ಎಂದು ಗುರುತಿಸಲಾಗಿದ್ದು, ಬಂಧಿತರಿಂದ 1ಲಕ್ಷ 34500 ರೂಪಾಯಿ, ಎರಡು ವಿವಿಧ ಬಣ್ಣದ ಮೊಬೈಲ್ ಗಳನ್ನ ವಶಕ್ಕೆ ಪಡೆಯಲಾಗಿದೆ.
ಇನ್ಸಪೆಕ್ಟರ್ ಸುರೇಶ ಕುಂಬಾರ ನೇತೃತ್ವದಲ್ಲಿ ಆರೋಪಿಗಳನ್ನ ಬಂಧನ ಮಾಡಿದ್ದು, ಇವರ ಹಿನ್ನೆಲೆಯನ್ನ ಮತ್ತಷ್ಟು ತನಿಖೆ ಮಾಡಲಾಗುತ್ತಿದೆ.