Posts Slider

Karnataka Voice

Latest Kannada News

ನೋಟಿಗೂ ತುಕ್ಕು: ಧಾರವಾಡ ಎಟಿಎಂನಲ್ಲಿ ಎಂತಹ ನೋಟುಗಳು ಬರ್ತಿವೆ ಗೊತ್ತಾ..!

1 min read
Spread the love

ಧಾರವಾಡ: ನಗರದ ವಿಶ್ವವಿದ್ಯಾಲಯದ ಎಸ್ ಬಿಐ ಎಟಿಎಂನಲ್ಲಿ ತುಕ್ಕು ಹಿಡಿದಂತಿರುವ ಎರಡು ಸಾವಿರ ನೋಟುಗಳು ಗ್ರಾಹಕರಿಗೆ ಸಿಕ್ಕಿದ್ದು, ಗ್ರಾಹಕ ಈ ನೋಟುಗಳನ್ನ ನೋಡಿ ಕಂಗಾಲಾದ ಘಟನೆ ನಡೆದಿದೆ.

ಧಾರವಾಡದ ಎಸ್.ಬಿ.ಐ ಎಟಿಎಂನಲ್ಲಿ ತುಕ್ಕು ಹಿಡಿದಂತಿರುವ ನೋಟುಗಳು ಬರುತ್ತಿದ್ದು, ಗ್ರಾಹಕರು ತೊಂದರೆ ಅನುಭವಿಸುತ್ತಿದ್ದಾರೆ. 2 ಸಾವಿರ ಮುಖಬೆಲೆಯ ನೋಟುಗಳು ತನ್ನ ಸ್ವರೂಪವನ್ನು ಕಳೆದುಕೊಂಡಿದ್ದು, ಬಳಕೆ ಮಾಡಲು ಬರದ ಹಾಗೇ ಇವೆ. ಎಟಿಎಂನಲ್ಲಿ ಹಣ ಪಡೆದುಕೊಂಡ ಗ್ರಾಹಕರು ತುರ್ತು ಸಂದರ್ಭಗಳಲ್ಲಿ ನೋಟು ಚಲಾವಣೆ ಮಾಡಲು ಹೋದರೆ ಯಾರು ಸಹ ಆ ನೋಟುಗಳನ್ನು ಮುಟ್ಟುತ್ತಿಲ್ಲ.

ಬೆಳ್ಳಂಬೆಳಿಗ್ಗೆ ಹಣದ ತೊಂದರೆಯಾದ ತಕ್ಷಣ ಎಟಿಎಂಗಳಿಗೆ ಹೋಗಿದ್ದ ಗ್ರಾಹಕನಿಗೆ ಬಹುತೇಕ ಎಟಿಎಂಗಳಲ್ಲಿ ಹಣ ದೊರಕಿಲ್ಲ. ಅದೇ ಕಾರಣಕ್ಕೆ ವಿಶ್ವವಿದ್ಯಾಲಯದ ಎಟಿಎಂಗೆ ಹೋದಾಗ, ಈ ಥರದ ನೋಟುಗಳು ಸಿಕ್ಕಿವೆ.

ಬ್ಯಾಂಕಿಗೆ ಹೋಗಿ ಹೇಳಿದರೆ ಸ್ವರೂಪ ಕಳೆದುಕೊಂಡ ನೋಟುಗಳ ಬದಲಾಗಿ ಬೇರೆ ನೋಟುಗಳನ್ನು ಕೊಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಜನ ಪರದಾಡುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *