ಹಳೇಹುಬ್ಬಳ್ಳಿ ಅರವಿಂದನಗರದಲ್ಲಿ ರೇಡ್: 17 ಜನರ ಬಂಧನ
1 min read
ಹುಬ್ಬಳ್ಳಿ: ದೀಪಾವಳಿಯಲ್ಲಿ ಯಾರೂ ತಮ್ಮನ್ನ ಕೇಳಿಲಿಕ್ಕಿಲ್ಲ ಎಂದುಕೊಂಡು ಇಸ್ಪೀಟ್ ಆಡುತ್ತಿದ್ದ 17 ಜನರನ್ನ ಅರವಿಂದನಗರದ ಬೈರನಾಥ ಕಲ್ಯಾಣ ಮಂಟಪದ ಎದುರಿಗಿನ ಖಾಲಿ ಜಾಗದಲ್ಲಿ ಬಂಧನ ಮಾಡಲಾಗಿದೆ.
ಪ್ರಭಾರ ಪೊಲೀಸ್ ಆಯುಕ್ತರಾಗಿರುವ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ ಮಾರ್ಗದರ್ಶನದಲ್ಲಿ ಇನ್ಸಪೆಕ್ಟರ್ ಸತೀಶ ಮಾಳಗೊಂಡ ನೇತೃತ್ವದಲ್ಲಿ ದಾಳಿ ನಡೆಸಿದ್ದು, 17 ಜನರನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ದೀಪಾವಳಿ ಸಮಯದಲ್ಲಿ ಪೊಲೀಸರು ಏನೂ ಮಾಡುವುದಿಲ್ಲವೆಂಬ ಹುಮ್ಮಸ್ಸಿನಲ್ಲಿ ಜೂಜಾಟದಲ್ಲಿ ತೊಡಗಿದ್ದವರಿಗೆ ಪೊಲೀಸರಿಗೆ ಶಾಕ್ ನೀಡಿದ್ದಾರೆ. ಬಂಧಿತರಿಂದ 10500 ರೂಪಾಯಿ ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.
ಆರೋಪಿಗಳನ್ನ ಬಂಧಿಸಿರುವ ಪೊಲೀಸ್ ಇನ್ಸಪೆಕ್ಟರ್ ಸತೀಶ ಮಾಳಗೊಂಡ ನೇತೃತ್ವದ ತಂಡಕ್ಕೆ ಬಹುಮಾನ ಘೋಷಣೆ ಮಾಡಿದ್ದಾರೆ.