Posts Slider

Karnataka Voice

Latest Kannada News

ಎಕ್ಕಾ ರಾಜಾ ರಾಣಿ… ಐದು ಬೈಕ್, ಆಟೋ ಸೇರಿ ಬಂಧನವಾಗಿದ್ದವರೆಷ್ಟು ಜನಾ ಗೊತ್ತಾ..! ಸಿಕ್ಕವರಲ್ಲಿ ಆತನೂ ಇದ್ದಾನೆ..!

1 min read
Spread the love

ಹುಬ್ಬಳ್ಳಿ; ವಾಣಿಜ್ಯನಗರಿಯಲ್ಲಿ ಪೊಲೀಸರ ದಾಳಿಗಳು ಹೆಚ್ಚಾಗುತ್ತಿದಂತೆ ಗ್ರಾಮೀಣ ಪ್ರದೇಶದತ್ತ ಇಸ್ಪೀಟ್ ಆಡುವವರು ದಾಪುಗಾಲು ಹಾಕುತ್ತಿದ್ದು, ಪೊಲೀಸರು ಅಲ್ಲಿಯೂ ಕೂಡಾ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ಇನ್ಸಪೆಕ್ಟರ್ ರಮೇಶ ಗೋಕಾಕ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಏಳು ಆರೋಪಿಗಳು ಸಿಕ್ಕಿಬಿದ್ದಿದ್ದು, ಮಾವನೂರು ಗ್ರಾಮದ ಸೇತುವೆ ಬಳಿ ಅಂದರ್-ಬಾಹರನಲ್ಲಿ ತೊಡಗಿದ್ದರು. ಬಂಧಿತರನ್ನ ಅಬ್ದುಲ್ ಗಫಾರ್, ಚಂದ್ರು  ,ಪರಶುರಾಮ, ಮಾಬುಸಾಬ, ಮಾರುತಿ, ಅಪ್ಪಯ್ಯ, ನಾಗೇಶ ಎಂದು ಗುರುತಿಸಲಾಗಿದ್ದು, ಓರ್ವ ಆರೋಪಿ ತಪ್ಪಿಸಿಕೊಂಡಿದ್ದಾನೆ.

ಬಂಧಿತ ಆರೋಪಿಗಳಿಂದ 1 ಆಟೋ, 5 ಬೈಕ್ ಹಾಗೂ 5200 ನಗದು ಮತ್ತು ಇಸ್ಪೀಟ್ ಎಲೆಗಳನ್ನ ವಶಕ್ಕೆ ಪಡೆದು, ಪೊಲೀಸರು ಕಾನೂನು ಕ್ರಮವನ್ನ ಜರುಗಿಸಿದ್ದಾರೆ. ಬಂಧಿತರಲ್ಲಿ ಪ್ರಮುಖನಾಗಿರುವ ಅಬ್ದುಲ ಗಫಾರ, ಹಲವು ದಿನಗಳಿಂದ ಇಸ್ಪೀಟ್ ದಂಧೆಯನ್ನ ನಡೆಸುತ್ತಿದ್ದ. ಈತನ ಬಗ್ಗೆ ಸುಳಿವು ಪಡೆದಿದ್ದ ಶಹರ ಪೊಲೀಸರನ್ನ ಕಣ್ಣು ತಪ್ಪಿಸಿ, ಗ್ರಾಮೀಣ ಪ್ರದೇಶದಲ್ಲಿ ತನ್ನ ಅಡ್ಡೆಯನ್ನ ಮುಂದುವರೆಸಿಕೊಂಡಿದ್ದ.

ಗ್ರಾಮೀಣ ಭಾಗದಲ್ಲಿಯೂ ಜೂಜಾಟದ ಬಗ್ಗೆ ತೀವ್ರ ನಿಗಾ ವಹಿಸಲಾಗಿದ್ದು, ಯಾರೇ ಇದ್ದರೂ ತಕ್ಷಣವೇ ದಾಳಿ ಮಾಡಿ, ಆರೋಪಿಗಳನ್ನ ಬಂಧನ ಮಾಡಲಾಗುತ್ತಿದೆ.

ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ರಾಜು ಕುಂದಗೋಳ, ದೇವರಾಜ, ಅರ್ಜುನ್ ಡಕಾಯಿ, ನಾರಾಯಣ ಹಿರೆಹೋಳ್ಳಿ, ಚಂದ್ರು ಬಾಗಿಯಾಗಿ ಆರೋಪಿಗಳನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.


Spread the love

Leave a Reply

Your email address will not be published. Required fields are marked *