Posts Slider

Karnataka Voice

Latest Kannada News

ಭೀಮಾತೀರದ ಮಹಾದೇವ ಸಾವುಕಾರ ಸ್ಥಿತಿ ಮತ್ತಷ್ಟು ಕ್ಲಿಷ್ಟ: ಬಂಧಿತರ ಸಂಖ್ಯೆ 19ಕ್ಕೇರಿಕೆ

1 min read
Spread the love

ವಿಜಯಪುರದ ಖಾಸಗಿ ಆಸ್ಪತ್ರೆಯಿಂದ ಬೇರೆ ಕಡೆ ಆಸ್ಪತ್ರೆಗೆ ಶಿಫ್ಟ್ ಆಗಿರುವ ಮಹಾದೇವ ಸಾವುಕಾರ ಅಲಿಯಾಸ್ ಮಹಾದೇವ ಬೈರಗೊಂಡನ ಸ್ಥಿತಿ ಮತ್ತಷ್ಟು ಕ್ಲಿಷ್ಟವಾಗಿದೆ

ವಿಜಯಪುರ: ಭೀಮಾತೀರದ ಮಹಾದೇವ ಸಾಹುಕಾರನ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಪೊಲಿಸರು ಮತ್ತೆ ಮೂವರನ್ನ ಬಂಧನ ಮಾಡಿದ್ದು, ಬಂಧಿತರ ಸಂಖ್ಯೆ 19ಕ್ಕೇರಿದೆ.

ಮಹಾದೇವ ಬೈರಗೊಂಡ ಮೇಲೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ 19 ಜನರನ್ನು ಬಂಧಿಸಿದಂತಾಗಿದೆ‌. ಈ ಕುರಿತು ವಿಜಯಪುರ ಎಸ್ ಪಿ ಅನುಪಮ ಅಗರವಾಲ  ಮಾಹಿತಿ ನೀಡಿದ್ದಾರೆ. ಗುಂಡಿನ ದಾಳಿಯಲ್ಲಿ ಭಾಗಿಯಾಗಿದ್ದವರನ್ನ ಬಂಧನ ಮಾಡುವಲ್ಲಿ ವಿಜಯಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು  ಇಂಡಿ ತಾಲೂಕಿನ ದೇಗಿನಾಳ ಗ್ರಾಮದ ಸಂಘರ್ಷ ಸೂರ್ಯವಂಶಿ, ಉಮರಾಣಿಯ ಸಂಗಪ್ಪ ಯಮದೆ ಹಾಗೂ ವಿಜಯಪುರದ ಜಲನಗರದ ಚೇತನ ಶಿರಶ್ಯಾಡ ಎಂದು ಗುರುತಿಸಲಾಗಿದೆ.
ಬಂಧಿತರಿಂದ ಒಂದು ಏರಗನ್,  ಒಂದು ಬೈಕ್, ಎರಡು ಮೊಬೈಲ್ ವಶಪಡಿಸಿ ಕೊಳ್ಳಲಾಗಿದೆ ಎಂದು ಎಸ್ ಪಿ ಅನುಪಮ ಅಗರವಾಲ ತಿಳಿಸಿದ್ದಾರೆ‌.  ನವೆಂಬರ್ 2ರಂದು ಭೀಮಾತೀರದ ಮಹಾದೇವ ಬೈರಗೊಂಡನ  ಮೇಲೆ ಗುಂಡಿನ ದಾಳಿ ನಡೆದಿತ್ತು. ದಾಳಿಯಲ್ಲಿ ಬೈರಗೊಂಡ ನ ಇಬ್ಬರು ಸಹಚರರು ಹತ್ಯೆಗೀಡಾಗಿದ್ದರು.

ಗುಂಡಿನ ದಾಳಿಯಲ್ಲಿ ಗಾಯಗೊಂಡ ಮಹಾದೇವ ಸಾಹುಕಾರ್ ಗೆ ಬೇರೆಡೆ ಶಿಪ್ಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಗುಂಡಿನ ದಾಳಿ ಪ್ರಕರಣದಲ್ಲಿ ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿ ಯಶಸ್ವಿಯಾದ ಎಡಿಷನಲ್ ಎಸ್ಪಿ ಡಾ. ರಾಮ ಅರಸಿದ್ದಿ, ಡಿವೈಎಸ್ಪಿ ಕೆ.ಸಿ.ಲಕ್ಷ್ಮೀನಾರಾಯಣ, ಸಿಪಿಐಗಳಾದ ಎಂ.ಕೆ.ದ್ಯಾಮಣ್ಣನವರ, ರವೀಂದ್ರ ನಾಯ್ಕೋಡಿ, ಸಿ.ಬಿ.ಬಾಗೇವಾಡಿ, ಸುರೇಶ ಬಂಡೆಗುಂಬಳ, ಸುನೀಲ ಕಾಂಬ್ಳೆ, ಬಸವರಾಜ ಮುಕಾರ್ತಿಹಾಳ ಹಾಗೂ ಪಿ.ಎಸ್.ಐ. ಹಾಗೂ ಸಿಬ್ಬಂದಿ ಕಾರ್ಯಕ್ಕೆ ಎಸ್ ಪಿ ಅನುಪಮ ಅಗರವಾಲ ಪ್ರಶಂಸೆವ್ಯಕ್ತಪಡಿಸಿದ್ದಾರೆ.


Spread the love

Leave a Reply

Your email address will not be published. Required fields are marked *