Posts Slider

Karnataka Voice

Latest Kannada News

ಹಣೆಗೆ ರಿವಾಲ್ವರಿಟ್ಟು “3.5ಕೋಟಿ” ಲೂಟಿ: ಜಿಪಂ ಮಾಜಿ ಸದಸ್ಯ ಸೇರಿ ಮೂವರ ಬಂಧನ…

1 min read
Spread the love

ಸಿನೇಮಾ ಸ್ಟೈಲ್‌ನಲ್ಲಿ ಗುಂಡು ಹಾರಿಸಿ ಕೋಟಿ ಕೋಟಿ ಲೂಟಿ

ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ

ಬೀದರ: ಸಿನಿಮೀಯ ರೀತಿಯಲ್ಲಿ ಕಾರ್‌ನ್ನ ಅಡ್ಡಗಡ್ಡಿ ಗಾಳಿಯಲ್ಲಿ ಗುಂಡು ಹಾರಿಸಿ 3ವರೆ ಕೋಟಿ ಲೂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಸೇರಿದಂತೆ ಮೂವರನ್ನ ಬಂಧಿಸಲಾಗಿದೆ.

ಪ್ರಕರಣ ದಾಖಲಾದ 12 ಗಂಟೆಯಲ್ಲಿ ಪ್ರಕರಣವನ್ನ ಬಸವಕಲ್ಯಾಣ ಠಾಣೆ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವೀಡಿಯೋ ಇಲ್ಲಿದೆ ನೋಡಿ…

ಬಸವಕಲ್ಯಾಣ ತಾಲೂಕಿನ ಹಣಮಂತವಾಡಿ ಬಳಿ ತಡರಾತ್ರಿ  ಘಟನೆ ನಡೆದಿದ್ದು, ಆಂಧ್ರ ಪ್ರದೇಶದ ತಿರುಪತಿ ನಿವಾಸಿ ಉಮಾ ಶಂಕ‌ರ್ ಭಾರದ್ವಾಜ ಎಂಬುವವರು ಈ ಸಂಬಂಧ ಬಸವಕಲ್ಯಾಣ ಗ್ರಾಮೀಣ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಗುಂಡುರೆಡ್ಡಿ, ವಿಜಯಕುಮಾರ್‌ ರೆಡ್ಡಿ ಹಾಗೂ ಸಂಜಯರೆಡ್ಡಿ ಎಂಬುವವರನ್ನು ವಶಕ್ಕೆ ಪಡೆದು ಆರೋಪಿಗಳಿಂದ 2.62 ಕೋಟಿ ರೂಪಾಯಿಯನ್ನ ಮನೆಯಿಂದ ಜಪ್ತಿ ಮಾಡಿದ್ದಾರೆ.

ಉಮಾಶಂಕರ್ ತಮ್ಮಿಬ್ಬರು ಸ್ನೇಹಿತರೊಂದಿಗೆ ಕಾರ್‌ನಲ್ಲಿ 3.50 ಕೋಟಿ ರೂ. ಇಟ್ಟುಕೊಂಡು ಹೈದ್ರಾಬಾದ್‌ನಿಂದ ಪಂಢರಪುರದಲ್ಲಿ ಹಾಲು ಖರೀದಿಸಿದ ರೈತರಿಗೆ ಹಣ ನೀಡಲು ಹೋಗುತ್ತಿದ್ದಾಗ ಈ ಘಟನೆ ನಡೆದಿತ್ತು.

ರಾಷ್ಟ್ರೀಯ ಹೆದ್ದಾರಿ 9ಕ್ಕೆ ತಗುಲಿಕೊಂಡಿರುವ ಹಣಮಂತವಾಡಿ ಗ್ರಾಮ ಸಮೀಪದ ಪನ್ನೀರ್ ಮತ್ತು ಖೋವಾ ಫ್ಯಾಕ್ಟರಿ ಬಳಿ ಫಿರ್ಯಾದಿ ಕಾರ್ ನಿಲ್ಲಿಸಿ ಫ್ರೆಶ್ ಅಪ್ ಆಗಲು ಇಳಿದಿದ್ದಾರೆ. ಆಗ ದ್ವಿಚಕ್ರ ವಾಹನಗಳಲ್ಲಿ ಬಂದ ಗುಂಡುರೆಡ್ಡಿ ಹಾಗೂ ವಿಜಯರೆಡ್ಡಿ ತಮ್ಮನ್ನು ತಾವು ಪರಿಚಯಿಸಿಕೊಂಡಿದ್ದಾರೆ. ಬಳಿಕ ಗುಂಡುರೆಡ್ಡಿ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿ ಫಿರ್ಯಾದಿ ಹಣೆ ಮೇಲೆ ಪಿಸ್ತೂಲ್ ಇಟ್ಟು 3.50 ಕೋಟಿ ರೂ. ಹಣದ ಬ್ಯಾಗ್‌ ತೆಗೆದುಕೊಂಡು ಪರಾರಿದ್ದರು.

ಆರೋಪಿಗಳ ವಿರುದ್ಧ ಸುಲಿಗೆ, ಕೊಲೆ ಯತ್ನ ಮತ್ತು ಆರ್ಮ್ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ಬೇಧಿಸಲು ಡಿಎಸ್‌ಪಿ ಜೆ ಎಸ್ ನ್ಯಾಮೆಗೌಡ‌ರ್ ಮಾರ್ಗದರ್ಶನದಲ್ಲಿ ಯಶಸ್ವಿ ಕಾರ್ಯಾಚರಣೆ……


Spread the love

Leave a Reply

Your email address will not be published. Required fields are marked *