ಅಂದರ್-ಬಾಹರ್ ಹಾವಳಿ: ಸಿಕ್ಕಿದ್ದು 126 ಜನ, 131 ಮೊಬೈಲ್- 56 ಲಕ್ಷ ರೂಪಾಯಿ: ಐಜಿಪಿ ರಾಘವೇಂದ್ರ ಸುಹಾಸ
1 min read
ಧಾರವಾಡ: ದೀಪಾವಳಿಯಲ್ಲಿ ಮೈಚಳಿ ಬಿಟ್ಟು ಅಂದರ್ ಬಾಹರ್ ನಲ್ಲಿ ತೊಡಗಿದ್ದ ಘಟನಾಘಟಿಗಳನ್ನ ಬಂಧನ ಮಾಡಿರುವ ಘಟನೆ ನಡೆದಿದೆ. ಪ್ರಮುಖ ಹೊಟೇಲಗಳಲ್ಲಿ ನಡೆಯುತ್ತಿದ್ದ ದಂಧೆಯನ್ನ ಪತ್ತೆ ಹಚ್ಚಿರುವ ಪೊಲೀಸರು ನೂರಾರು ಜನರನ್ನ ಬಂಧನ ಮಾಡಿ, ಲಕ್ಷಾಂತರ ರೂಪಾಯಿ ವಶಪಡಿಸಿಕೊಂಡಿದ್ದಾರೆ.
ಇಸ್ಪೀಟಿನಲ್ಲಿ ಸಿಕ್ಕವರ ಬಗ್ಗೆ ಐಜಿಪಿ ಹೇಳಿದ್ದು ಇಲ್ಲಿದೆ ನೋಡಿ
ಧಾರವಾಡದ ರಮ್ಯ ರೆಸಿಡೆನ್ಸಿಯಲ್ಲಿ ಸಿಕ್ಕು ಬಿದ್ದರು ಕಾಂಗ್ರೆಸ್-ಬಿಜೆಪಿ ಮುಖಂಡರು
ಕಾಂಗ್ರೆಸ್ ನ ಇಸ್ಮಾಯಿಲ ತಮಾಟಗಾರ, ಬಿಜೆಪಿಯ ತವನಪ್ಪ ಅಷ್ಟಗಿ ಅಂದರ್
ಇಲ್ಲಿ ಸಿಕ್ಕಿದ್ದು 49 ಲಕ್ಷ ಹಣ, 40 ವಾಹನ, 66 ಮೊಬೈಲ್
ಅವಳಿನಗರದ ಇತಿಹಾಸದಲ್ಲೇ ಬಹುದೊಡ್ಡ ಇಸ್ಪೀಟ್ ರೇಡ್ ನಡೆದಿದ್ದು, ಅವಳಿನಗರದ ಘಟನಾಘಟಿ ಪಂಟರುಗಳು ಸಿಕ್ಕಿಬಿದ್ದಿದ್ದು, ಪೊಲೀಸ್ ವರಿಷ್ಠಾಧಿಕಾರಿಯೂ ಆಗಿರುವ ಡಿಸಿಪಿ ಪಿ.ಕೃಷ್ಣಕಾಂತ ನೇತೃತ್ವದಲ್ಲಿ ದಾಳಿ ನಡೆದಿದೆ. ದಾಳಿಯಲ್ಲಿ 56 ಜನರು ಸಿಕ್ಕಿಬಿದಿದ್ದು ಇದರಲ್ಲಿ ಬಿಜೆಪಿ ಮುಖಂಡ ತವನಪ್ಪ ಅಷ್ಟಗಿ, ಕಾಂಗ್ರೆಸ್ ಮುಖಂಡ ಇಸ್ಮಾಯಿಲ ತಮಾಟಗಾರ, ಹೊಟೇಲ್ ಸಂಘದ ಮಹೇಶ ಶೆಟ್ಟಿ, ಹವಾಲಾ ಕುಳ ಸಮುಂದರಸಿಂಗ್ ಸೇರಿದಂತೆ ಹಲವು ನಾಮಿ ಜನರು ಸಿಕ್ಕಿಬಿದ್ದಿದ್ದಾರೆ.
ಅವ್ಯಾಹತವಾಗಿ ನಡೆಯುತ್ತಿದ್ದ ದಂಧೆಯನ್ನ ಮಟ್ಟ ಹಾಕಬೇಕೆಂಬ ಉದ್ದೇಶದಿಂದ ನಡೆದ ದಾಳಿಯಲ್ಲಿ ಇನ್ನೂ ಹಲವರು ಸಿಕ್ಕಿಬಿದ್ದಿದ್ದು, ಪ್ರತಿಯೊಬ್ಬರ ಹೆಸರುಗಳು ಹೊರಗೆ ಬರಬೇಕಿವೆ. ಈಗಾಗಲೇ ಹುಬ್ಬಳ್ಳಿಯ ಕೆಲವರು ಇರುವ ಬಗ್ಗೆಯೂ ಮಾಹಿತಿ ಇದೆ.
ಅವಳಿನಗರದಲ್ಲಿ ಒಟ್ಟು 126 ಜನರನ್ನ ಬಂಧನ ಮಾಡಿರುವುದು ಹೊಸ ಬೆಳವಣಿಗೆ. ಪೊಲೀಸರ ಈ ಕಾರ್ಯಾಚರಣೆ ಸಾರ್ವಜನಿಕರಿಂದ ಪ್ರಶಂಸೆಗೆ ಕಾರಣವಾಗಿದ್ದು, ತಂಡದಲ್ಲಿದ್ದ ಎಲ್ಲ ಅಧಿಕಾರಿಗಳಿಗೂ ಜನರ ಪ್ರೀತಿ ದೊರೆಯಲಿದೆ.