ಅಂದರ್-ಬಾಹರ್ ‘ಕಿಂಗ್’ ಅಬ್ದುಲ ಸಮದ್ ಬಂಧನ
1 min read
ಹುಬ್ಬಳ್ಳಿ: ಪೊಲೀಸರನ್ನ ಕಣ್ಣು ತಪ್ಪಿಸಿ ನಿರಂತರವಾಗಿ ಜೂಜಾಟದಲ್ಲೇ ತೊಡಗಿ, ಅಲ್ಲಲ್ಲಿ ಅಡ್ಡೆಗಳನ್ನ ನಡೆಸುತ್ತಿದ್ದ ಅಂದರ್-ಬಾಹರ್ ಕಿಂಗ್ ಪಿನ್ ಅಬ್ದುಲ ಸಮದ ಸಮೇತ ಐವರನ್ನ ಬಂಧನ ಮಾಡುವಲ್ಲಿ ಹುಬ್ಬಳ್ಳಿಯ ಗ್ರಾಮೀಣ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿಯ ಕುಸುಗಲ್ ಕೆರೆಯ ಬಳಿಯಲ್ಲಿ ಅಂದರ್-ಬಾಹರ್ ಆಡುತ್ತಿದ್ದವರ ಬಗ್ಗೆ ಖಚಿತ ಮಾಹಿತಿ ಸಿಗುವ ಜೊತೆಗೆ ಅದರಲ್ಲಿ ಅಬ್ದುಲಸಮದ ಕೂಡಾ ಇದ್ದನೆಂಬ ಮೆಸೇಜ್ ಸಿಕ್ಕ ತಕ್ಷಣವೇ ಗ್ರಾಮೀಣ ಠಾಣೆಯ ಇನ್ಸಪೆಕ್ಟರ್ ರಮೇಶ ಗೋಕಾಕ ನೇತೃತ್ವದ ತಂಡ ದಾಳಿ ಮಾಡಿದಾಗ, ಸಮದ ಸಮೇತ ಐವರು ಸಿಕ್ಕು ಬಿದ್ದಿದ್ದಾರೆ.
ಬಂಧಿತರನ್ನ ಹುಬ್ಬಳ್ಳಿ ತಾಲೂಕಿನ ಕುಸುಗಲ್ಲ್ ಗ್ರಾಮದ ಅಬ್ದುಲ ಸಮದ್, ಲಾಲಸಾಬ್, ಕಾಸಿಂಸಾಬ್, ಹಜರೇಸಾಬ್, ಆದಂಸಾಬ್ ಎಂದು ಗುರುತಿಸಲಾಗಿದ್ದು, ಬಂಧಿತರಿಂದ ಸಾವಿರಾರೂ ರೂಪಾಯಿ ನಗದು, ಮೊಬೈಲ್ ಹಾಗೂ 2 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಅಬ್ದುಲಸಮದ ಹುಬ್ಬಳ್ಳಿ ಶಹರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲೂ ನಿರಂತರವಾಗಿ ಜೂಜಾಟವಾಡುತ್ತಿದ್ದ ಎಂಬ ಮಾಹಿತಿಯಿತ್ತು. ಇದೀಗ ಗ್ರಾಮೀಣ ಪೊಲೀಸರೇ ಆತನನ್ನ ಹೆಡಮುರಿಗೆ ಕಟ್ಟಿದ್ದು, ಇನ್ನುಳಿದವರಿಗೆ ಬಿಸಿ ಮುಟ್ಟಲಿದೆ.