Posts Slider

Karnataka Voice

Latest Kannada News

ACID ದಾಳಿ ಆಕೆ ಎರಡು ಮಕ್ಕಳ ತಾಯಿ: ಒನ್ ಸೈಡ್ ಲವ್ ಅಂತೆ..!

1 min read
Spread the love

ಬೆಳಗಾವಿ: ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ ಆಸಿಡ್ ದಾಳಿ ಮಾಡಿದ್ದ ಪ್ರಕರಣದಲ್ಲಿ ಹೊಸದೊಂದು ಟ್ವಿಸ್ಟ್ ಸಿಕ್ಕಿದ್ದು, ಆಕೆ ಯುವತಿಯಲ್ಲ ಎರಡು ಮಕ್ಕಳ ತಾಯಿ ಎಂಬುದು ಗೊತ್ತಾಗಿದೆ.

ಹಲವು ವರ್ಷಗಳಿಂದ ಪಟ್ಟಣದಲ್ಲಿ ಬಾಳೆಹಣ್ಣು ಮಾರಾಟ ಮಾಡುತ್ತಿದ್ದ ಮಹಿಳೆಯನ್ನ ದೂರದಿಂದಲೇ ಇಷ್ಟಪಡುತ್ತಿದ್ದ ವ್ಯಕ್ತಿಯೇ ಹೀಗೆ ಮಾಡಿರಬಹುದೆಂದು ಶಂಕೆ ವ್ಯಕ್ತಪಡಿಸಲಾಗಿದ್ದು, ಪರಾರಿಯಾದವನ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

ಬಾಳೆಹಣ್ಣಿನ ವ್ಯಾಪಾರ ಮಾಡುತ್ತಿದ್ದಾಗಲೇ ಮಹಿಳೆಯ ಮೈಮೇಲೆ ಆಸಿಡ್ ಸುರಿದ ಪರಿಣಾಮ ಕುತ್ತಿಗೆ ಭಾಗದಲ್ಲಿ ತೀವ್ರ ಗಾಯವಾಗಿದ್ದು, ಚಿಕಿತ್ಸೆಯನ್ನ ಸರಕಾರಿ ಆಸ್ಪತ್ರೆಯಲ್ಲಿ ನೀಡಲಾಗುತ್ತಿದೆ.

ಮಹಿಳೆಯ ನರಳಾಟ ಕೇಳಿದ ಸ್ಥಳೀಯರು ನೀರು ಹಾಕಿದ್ದರು. ತಕ್ಷಣವೇ ಚಿಕಿತ್ಸೆಗಾಗಿ ಅಂಬುಲೆನ್ಸ್ ದಲ್ಲಿ ರಾಯಬಾಗ ಸರಕಾರಿ ಆಸ್ಪತ್ರೆಗೆ ರವಾನಿಸಿದ್ದರಿಂದ ಉಪಚಾರ ಸಿಕ್ಕಿದ್ದರಿಂದ, ಹೆಚ್ಚಿನ ತೊಂದರೆ ತಪ್ಪಿದೆ. ಮಹಿಳೆಯ ಮೇಲಿನ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಆರೋಪಿಯ ಪತ್ತೆಗಾಗಿ ತಂಡವನ್ನ ರಚನೆ ಮಾಡಿದ್ದಾರೆ.


Spread the love

Leave a Reply

Your email address will not be published. Required fields are marked *