ಪ್ರಮೋಟಿವ್ ಪಿಎಸೈ ರಸ್ತೆ ಅಪಘಾತದಲ್ಲಿ ದುರ್ಮರಣ
1 min read
ಚಿಕ್ಕಮಗಳೂರು: ಕರ್ತವ್ಯ ನಿರ್ವಹಿಸಿ ಬೈಕಿನಲ್ಲಿ ಮನೆಗೆ ಹೋಗುತ್ತಿದ್ದ ಸಮಯದಲ್ಲಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪ್ರಮೋಟಿವ್ ಪಿಎಸೈ ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಚಿಕ್ಕಮಗಳೂರು ಹೊರವಲಯದ ಹಿರೇಗೌಜ ಬಳಿ ನಡೆದಿದೆ.
ಪ್ರಮೋಟಿವ್ ಪಿಎಸ್ಐ ಆಗಿರುವ ಸಿದ್ಧರಾಮಪ್ಪ ಅವರೇ ಮೃತರಾಗಿದ್ದು, ಎಎಸ್ಐ ಆಗಿದ್ದ ಅವರಿಗೆ ಪ್ರಮೋಷನ್ ಸಿಕ್ಕಿದ್ದು ಇಂದು ಅವರು ಪ್ರಮೋಟಿವ್ ಜಾಗಕ್ಕೆ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಮನೆಗೆ ಹಿಂದಿರುಗುವ ವೇಳೆ ಈ ದುರ್ಘಟನೆ ನಡೆದಿದೆ.
ಪೇದೆಯಾಗಿದ್ದ ಸಿದ್ಧರಾಮಪ್ಪ ಕಾಲ ಕಾಲಕ್ಕೆ ಪ್ರಮೋಷನ್ ಪಡೆದು ಉತ್ತಮವಾಗಿ ಕಾರ್ಯನಿರ್ವಹಿಸುತ್ತ ಬಂದಿದ್ದರು. ಠಾಣೆಯಲ್ಲಿಯೂ ಎಲ್ಲರೊಂದಿಗೂ ಅತ್ಯುತ್ತಮ ಬಾಂಧವ್ಯ ಹೊಂದಿದ್ದರಿಂದ, ಈ ಘಟನೆ ಠಾಣೆಯಲ್ಲಿ ಸಿಬ್ಬಂದಿಗಳನ್ನ ದುಃಖದ ಮಡುವಿನಲ್ಲಿರುವಂತೆ ಮಾಡಿದೆ.
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು, ಕಾರು ಚಾಲಕನನ್ನ ವಶಕ್ಕೆ ಪಡೆದು ಪರಿಶೀಲನೆಯನ್ನ ನಡೆಸಿದ್ದಾರೆ.